ಮಾರ್ಚ್​ ಒಳಗೆ ಕಾಮಗಾರಿ ಪೂರ್ಣ

district koppal minister bosaraju visit
Published on

ಕೊಪ್ಪಳ: ಕೊಪ್ಪಳ-ಯಲಬುರ್ಗಾ ಕೆರೆ ತುಂಬಿಸುವ ಯೋಜನೆ 2018ರಲ್ಲೇ ಆರಂಭವಾಗಿದೆ. ಆರು ವರ್ಷವಾದರೂ ಪೂರ್ಣಗೊಂಡಿಲ್ಲ. ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಸಣ್ಣ ನೀರಾವರಿ ಸಚಿವ ಎನ್​.ಎಸ್​.ಬೋಸರಾಜು ತಿಳಿಸಿದರು.

ತಾಲೂಕಿನ ನಾರಾಯಣಪೇಟೆ ಬಳಿ ಶುಕ್ರವಾರ ಜಾಕ್​ವೆಲ್​ ಕಾಮಗಾರಿ ಪರಿಶೀಲಿಸಿ ಮಾತನಾಡಿದರು.

293 ಕೋಟಿ ರೂ.ನಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ತುಂಬ ತಡವಾಗಿದೆ. ಎರಡು ಹಂತದಲ್ಲಿ ಅನುಷ್ಠಾನಗೊಳಿಸುತ್ತಿದ್ದು, ಒಂದೆರೆಡು ತಿಂಗಳಲ್ಲಿ ಮೊದಲನೇ ಹಂತ ಪೂರ್ಣಗೊಳಿಸಲು ತಾಕೀತು ಮಾಡಿರುವೆ. ಒಟ್ಟು 13 ಕೆರೆಗಳಿದ್ದು, ಮೊದಲ ಹಂತದಲ್ಲಿ ಕೊಪ್ಪಳ ತಾಲೂಕು ಒಳಗೊಂಡು ಆರು ಕೆರೆಗಳನ್ನು ತುಂಬಿಸಲಾಗುವುದು. ಗುತ್ತಿಗೆದಾರರು ಕೆಲಸ ಮಾಡುತ್ತಿಲ್ಲವೆಂದು ಕೈ ಕಟ್ಟಿ ಕುಳಿತುಕೊಳ್ಳುವುದಲ್ಲ. ಅವರಿಂದ ಕೆಲಸ ಮಾಡಿಸಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳು ಹಾಗೂ ನಮ್ಮ ಮೇಲಿದೆ. ತಪ್ಪೆಸಗಿದವರಿಗೆ ದಂಡ ವಿಧಿಸುವ ಕೆಲಸವಾಗಲಿದೆ ಎಂದು ಭರವಸೆ ನೀಡಿದರು.

ಜಾಕ್​ವೆಲ್​, ಪಂಪ್​ಹೌಸ್​, ನದಿ ದಡದಲ್ಲಿ ನೀರೆತ್ತುವ ಸ್ಥಳ ವೀಸಿದ ಸಚಿವರು, ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಆರು ವರ್ಷವಾದರೂ ಕಾಮಗಾರಿ ಪೂರ್ಣಗೊಳಿಸದೆ ನೀವೇನು ಮಾಡುತ್ತಿದ್ದೀರಿ. ಸರಿಯಾಗಿ ಕೆಲಸ ಮಾಡದಿದ್ದರೆ ವರ್ಗಾವಣೆ ಮಾಡಲಾಗುವುದು. ಕಾಮಗಾರಿಗಳ ಬಗ್ಗೆ ನಿಗಾವಹಿಸುತ್ತಿಲ್ಲ. ಸಮಸ್ಯೆಗಳು ಏನಿವೆ, ಯಾಕೆ ವಿಳಂಬವಾಗುತ್ತಿದೆ, ಅದಕ್ಕೆ ಪರಿಹಾವೆನೆಂದು ಗೊತ್ತಿಲ್ಲ. ಎಲ್ಲವನ್ನು ಗುತ್ತಿಗೆದಾರರ ಮೇಲೆ ಬಿಟ್ಟಿದ್ದೀರಿ. ಹೀಗಾ ಆಡಳಿತ ಮಾಡೋದು ಎಂದು ಗದರಿದರು. ಸಮಸ್ಯೆಗಳ ಬಗ್ಗೆ ತಿಳಿಸಿ. ಅದಕ್ಕೆ ಪರಿಹಾರ ಕಂಡುಕೊಳ್ಳೋಣ ಎಂದು ಸಲಹೆ ನೀಡಿದರು.

ಸಂಸದ ರಾಜಶೇಖರ ಹಿಟ್ನಾಳ, ವಿಶ್ವನಾಥ ರೆಡ್ಡಿ, ನವೋದಯ ವಿರುಪಣ್ಣ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net