ಅಕ್ರಮ ಮರಳು ಅಡ್ಡೆ ಮೇಲೆ ದಾಳಿ

district koppal mining ride mines department
Published on

ಕೊಪ್ಪಳ: ತಾಲೂಕಿನ ಸಿಂದೋಗಿ ಬಳಿ ಹಿರೇಹಳ್ಳದಲ್ಲಿ ಮರಳು ಅಕ್ರಮ ಗಣಿಗಾರಿಕೆ ಮೇಲೆ  ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳು ದಿಢೀರ್​ ದಾಳಿ ನಡೆಸಿ ಅಕ್ರಮಕೋರರಿಗೆ ಶಾಕ್​ ನೀಡಿದ್ದಾರೆ.

ಭೂ ವಿಜ್ಞಾನಿ ರಿಯಾಜ್​ ನೇತೃತ್ವದಲ್ಲಿ ಗಣಿ ಮತ್ತು ಭೂ ವಿಜ್ಞಾನ, ಪೊಲಿಸ್​, ಅರಣ್ಯ, ಪರಿಸರ, ಕಂದಾಯ ಹಾಗೂ ವಿವಿಧ ಅಧಿಕಾರಿಗಳ ತಂಡ ದಾಳಿ ಮಾಡಿದೆ. ಹಳ್ಳದಲ್ಲಿ ಮರಳು ಫಿಲ್ಟರ್​ ಮಾಡಲು ಹಾಕಿದ್ದ ಬೋಟ್​ಗಳನ್ನು ಕಿತ್ತು ಹಾಕಿದರು. ಕೆಲ ಬೋಟ್​ಗಳನ್ನು ಜೆಸಿಬಿ ಸಹಾಯದಿಂದ ಮುರಿದು ಹಾಕಿದರು. ಅನಧಿಕೃತ ಶೆಡ್​ಗಳನ್ನು ತೆರವು ಮಾಡಲಾಗಿದೆ. ಏಕಾಏಕಿ ನಡೆದ ದಾಳಿಯಿಂದ ಅಕ್ರಮಕೋರರಿಗೆ ಶಾಕ್​ ಆಗಿದ್ದು, ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಇನ್ನು ಕೆಲವರು ಗಿಡಗಳ ಮಧ್ಯ ಬಚ್ಚಿಟ್ಟಿದ್ದ ಬೋಟ್​ಗಳನ್ನು ಹುಡುಕಿ ತೆಗೆದು ವಶಕ್ಕೆ ಪಡೆಯಲಾಯಿತು. ದಡದಲ್ಲಿ ಮುಚ್ಚಿಟ್ಟದ ಬೋಟ್​ ಕಿತ್ತುವ ವೇಳೆ ಮಹೇಶ ಎಂಬಾತ ಓಡೋಡಿ ಬಂದು ತಡೆಯಲು ಯತ್ನಿಸಿದ್ದಾನೆ.

ಸುಮಾರು 50ಕ್ಕೂ ಹೆಚ್ಚು ಬೋಟ್​ಗಳನ್ನು ಅಳವಡಿಸಿದ್ದು ಪತ್ತೆಯಾಗಿದೆ. ಒಂದೊಂದೊದರ ಬೆಲೆ ಸುಮಾರು ಮೂರು ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಶಿಗ್ಗಾಂವ್​&ಕಲ್ಮಲಾ ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ಹಳ್ಳವಿದೆ. ಹೀಗಿದ್ದರೂ ರಾಜಾರೋಷವಾಗಿ ಮರಳು ಅಕ್ರಮ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net