ಕೊಪ್ಪಳ: ಬೆಂಬಲ ಬೆಲೆ ಯೋಜನೆಯಡಿ ಶೇಂಗಾ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಎಪಿಎಂಸಿ ನಿರ್ದೇಶಕರು ತಿಳಿಸಿದ್ದಾರೆ.
ಪ್ರತಿ ಕ್ವಿಂಟಾಲ್ಗೆ 6,783ರೂ.ನಂತೆ ಎಕರೆಗೆ ಮೂರು ಕ್ವಿಂಟಾಲ್ನಂತೆ ಒಬ್ಬ ರೈತರಿಂದ ಗರಿಷ್ಠ 15 ಕ್ವಿಂಟಾಲ್ ಖರೀದಿಸಲಾಗುವುದು. ಕೊಪ್ಪಳ ತಾಲೂಕಿನ ಅಳವಂಡಿ, ಮುದ್ದಾಬಳ್ಳಿ, ಕುಕನೂರು ತಾಲೂಕಿನ ಬೇವೂರಿನಲ್ಲಿ ಖರೀದಿ ಕೇಂದ್ರ ಆರಂಭಿಸಲಾಗಿದೆ.
ಅಳವಂಡಿ, ಮುದ್ದಾಬಳ್ಳಿ ಕೇಂದ್ರಕ್ಕೆ ಕೊಪ್ಪಳ ಎಪಿಎಂಸಿ ಕಾರ್ಯದರ್ಶಿ ವಿ.ಬಸವರಾಜ ಮೊ.ಸಂ: 9448765143, ಹಾಗೂ ಬೇವೂರು ಖರೀದಿ ಕೇಂದ್ರಕ್ಕೆ ಯಲಬುರ್ಗಾ ಎಪಿಎಂಸಿ ಕಾರ್ಯದರ್ಶಿ ಗುರುಪ್ರಸಾದ್ ಗುಡಿ ಮೊ.ಸಂ: 9972054874 ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಮಾಹಿತಿಗಾಗಿ ರಾಜ್ಯ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ ರಾಯಚೂರು ವಿಭಾಗೀಯ ಕಚೇರಿ ಕೊಪ್ಪಳ ಮೊ.ಸಂ: 9739074040 ಸಂಪರ್ಕಿಸಲು ತಿಳಿಸಿದ್ದಾರೆ