

ಕೊಪ್ಪಳ: ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ಭತ್ತ ಹಾಗೂ ಬಿಳಿ ಜೋಳ ಖರೀದಿ ಆರಂಭಿಸಲಾಗಿದೆ.
ಸಾಮಾನ್ಯ ಭತ್ತ ಪ್ರತಿ ಕ್ವಿಂಟಾಲ್ಗೆ 2,300ರೂ., ಗ್ರೇಡ್ ಎ ಭತ್ತಕ್ಕೆ 2,320ರೂ. ದರ ನಿಗದಿಪಡಿಸಲಾಗಿದೆ. ಬಿಳಿಜೋಳಕ್ಕೆ 3,371 ಮತ್ತು ಮಾಲ್ದಂಡಿ ಬಿಳಿಜೋಳಕ್ಕೆ 3,421ರೂ. ಇದೆ. ಭತ್ತ ಖರೀದಿಗೆ ಮಾ.20ರಿಂದ ಏ.25ವರೆಗೆ, ಜೋಳ ಖರೀದಿಗೆ ಮಾ.25 ರಿಂದ ಮೇ 31ರ ವರೆಗೆ ರೈತರು ನೋಂದಣಿ ಮಾಡಬಹುದು. ಪ್ರತಿ ಎಕರೆಗೆ 25 ಕ್ವಿಂಟಾಲ್ನಂತೆ ಪ್ರತಿ ರೈತರಿಂದ ಗರಿಷ್ಠ 50 ಕ್ವಿಟಾಲ್ ಭತ್ತ ಖರೀದಿಸಲಾಗುವುದು. ಬಿಳಿ ಜೋಳ ಪ್ರತಿ ಎಕರೆಗೆ 20 ಕ್ವಿಂಟಾಲ್ನಂತೆ ಗರಿಷ್ಠ 150 ಕ್ವಿಂಟಾಲ್ ಖರೀದಿಸಲಾಗುವುದು.
ಕೊಪ್ಪಳ ಎಂ.ವಿ.ಕೋನಾಪೂರ ಮೊ.ಸಂ: 9739228720, ಅಬ್ಬಾಸ್ ಅಲಿ ಮೊ.ಸಂ: 9482238556, ಗಂಗಾವತಿ ಸೋಮಶೇಖರ ಮೊ.ಸಂ: 6361289585, ಸುಹಾಸ ಮೊ.ಸಂ: 9886320360, ಕುಷ್ಟಗಿ ಸೋಮಶೇಖರ ಮೊ.ಸಂ: 6361289585, ಚನ್ನಬಸಪ್ಪ, ಮೊ.ಸಂ: 9449464125, ಯಲಬುರ್ಗಾ ಎಂ.ವಿ.ಕೋನಾಪೂರ ಮೊ.ಸಂ: 9739228720, ಮಲ್ಲಿಕಾರ್ಜುನ ಮೊ.ಸಂ: 9844960399, ಕಾರಟಗಿ ಸೋಮಶೇಖರ ಮೊ.ಸಂ: 6361289585, ನವೀನ್ಮಠದ್ ಮೊ.ಸಂ: 8123453419, ಕನಕಗಿರಿ ಸೋಮಶೇಖರ ಮೊ.ಸಂ: 6361289585, ಚನ್ನಬಸಪ್ಪ ಮೊ.ಸಂ: 9449464125 ಇವರನ್ನು ಸಂಪರ್ಕಿಸಬಹುದೆಂದು ಆಹಾರ ಇಲಾಖೆ ಡಿಡಿ ತಿಳಿಸಿದ್ದಾರೆ.