ಸಿರಿಧಾನ್ಯ ಬಳಕೆ ಆರೋಗ್ಯಕ್ಕೆ ಪೂರಕ

district koppal millate agreeculture department
Published on

ಕೊಪ್ಪಳ: ಸಿರಿಧಾನ್ಯಗಳು ಆರೋಗ್ಯಕ್ಕೆ ಪೂರಕವಾಗಿದ್ದು, ಈ ಬಗ್ಗೆ ಹೆಚ್ಚಿನ ಜಾಗೃತಿ ಅವಶ್ಯ ಎಂದು ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ಹೇಳಿದರು.

ಕೃಷಿ ಇಲಾಖೆಯಿಂದ ಬುಧವಾರ ಹಮ್ಮಿಕೊಂಡಿದ್ದ ಸಿರಿಧಾನ್ಯ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.

ಇಂದಿನ ಆಹಾರ ಪದ್ಧತಿಯಿಂದಲೇ ಅನೇಕ ರೋಗಗಳು ಬರುತ್ತಿವೆ. ಉತ್ತಮ ಆರೋಗ್ಯ ಹೊಂದಲು ಸಿರಿಧಾನ್ಯ ಬಳಸಬಹುದು. ರಕ್ತದೊತ್ತಡ, ಸಕ್ಕರೆ ಕಾಯಿಲೆಗಳನ್ನು ಇದರಿಂದ ನಿಯಂತ್ರಣ ಮಾಡಬಹುದು ಎಂದರು.

ಗವಿಮಠದಿಂದ ಅಶೋಕ ವೃತ್ತವರೆಗೆ ಜಾಥಾ ನಡೆಯಿತು. ಡೊಳ್ಳು ಕುಣಿತ ಹಾಗೂ ಸಾಂಪ್ರದಾಯಿಕ ಉಡುಗೆ ತೊಟ್ಟ ಜನರು ಜಾಗೃತಿ ಮೂಡಿಸಿದರು. ಸಿರಿಧಾನ್ಯ ಬೆಳೆಯುವಿಕೆ, ಸರ್ಕಾರದ ಪ್ರೋತ್ಸಾಹ, ಬಳಕೆ, ಅದರಿಂದ ಆಗುವ ಲಾಭಗಳ ಬಗ್ಗೆ ವಿವರಿಸಿದರು.

ಗವಿಮಠದ ಬಳಿ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ಈಶ್ವರಿಯ ವಿವಿಯ ಅಕ್ಕ ಬ್ರಹ್ಮಕುಮಾರಿ ಯೋಗಿನಿ ಜಾಥಾಗೆ ಶುಭ ಕೋರಿದರು.

ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್​., ಉಪ ನಿರ್ದೇಶಕ ಸಿದ್ದೇಶ, ತಾಲೂಕು ಕೃಷಿ ಅಧಿಕಾರಿಗಳಾದ ಸಂತೋಷ, ಪ್ರಮೋದ, ಅಜ್ಮೀರ ಅಲಿ, ಜೀವನ ಸಾಬ, ಐಎಟಿ ಕಾರ್ಯದರ್ಶಿ ವೀರಣ್ಣ ಕಮತರ, ಎಸ್​.ಬಿ.ಕೋಣೆ, ತಾಂತ್ರಿಕ ಸಲಹೆಗಾರ ಎಂ.ಎಂ.ಹಸನ್​, ಪ್ರಕಾಶ ಚವಡಿ, ಮಹ್ಮದ್​ ಗೇಸುದಾರ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net