

ಕೊಪ್ಪಳ: ಬಿಸಿಯೂಟ ನೌಕರರ ವೇತನ ಹೆಚ್ಚಳ ಮಾಡುವಂತೆ ಆಗ್ರಹಿಸಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಒಕ್ಕೂಟ ಜಿಲ್ಲಾ ಟಕದ ಪದಾಧಿಕಾರಿಗಳು ನಗರದ ದಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ನಮ್ಮ ವೇತನ ಹೆಚ್ಚಳ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ, ಈವರೆಗೂ ಜಾರಿ ಮಾಡಿಲ್ಲ. ಕೆಲಸದ ಹೊರೆ ಹೆಚ್ಚುತ್ತಿದೆ. ಹಲವು ವರ್ಷದಿಂದಲೂ ಕೆಲಸ ಮಾಡುತ್ತಿದ್ದೇವೆ. ಸರ್ಕಾರ ಕೊಡುವ ಗೌರವ ಧನ ಹೆಚ್ಚಳವಾಗಿಲ್ಲ. ಹಲವು ಬಾರಿ ಮನವಿ ಸಲ್ಲಿಸಿ, ಪ್ರತಿಭಟನೆ ಮಾಡಿದರೂ ಪ್ರಯೋಜನವಾಗಿಲ್ಲವೆಂದು ಅಳಲು ತೋಡಿಕೊಂಡರು.
ಕನಿಷ್ಠ ವೇತನ, ಪಿಂಚಣಿ ಯೋಜನೆ ಜಾರಿ ಮಾಡಬೇಕು. ಕರ್ತವ್ಯನಿರತ ನೌಕರರು ತೀರಿಕೊಂಡಾಗ ಅವರಿಗೆ ತಕ್ಷಣ ಪರಿಹಾರ ನೀಡಬೇಕು. ಗಾಯಗೊಂಡಲ್ಲಿ ಅವರ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಬೇಕು. ಇಡಿಗಂಟು ಮೊತ್ತ ಎರಡು ಲಕ್ಷ ರೂ.ಗೆ ಹೆಚ್ಚಿಸಿ. ಜಂಟಿ ಖಾತೆ ನಿರ್ವಹಣೆ ಹೊಸದಾಗಿ ಹೊರಡಿಸಿದ ಆದೇಶ ವಾಪಸ್ ಪಡೆಯಬೇಕು. ಪ್ರತಿ ತಿಂಗಳು 5ನೇ ತಾರೀಖಿನೊಳಗೆ ವೇತನ ಪಾವತಿಸಬೇಕು. ಬಿಸಿಯೂಟ ನೌಕರರ ಮೇಲೆ ಆಗುತ್ತಿರುವ ದೌರ್ಜನ್ಯಕ್ಕೆ ಕ್ರಮವಹಿಸಬೇಕು ಎಂದು ಒತ್ತಾಯಿಸಬೇಕೆಂದು ಆಗ್ರಹಿಸಿದರು.
ಪ್ರಮುಖರಾದ ಬಸವರಾಜ ಶೀಲವಂತರ, ಮಹಾಂತೇಶ ಕೊತಬಾಳ, ಗಾಳೆಪ್ಪ ಮುಂಗೋಲಿ, ಮುಕಬುಲ್ ರಾಯಚೂರು, ಸಂಜಯದಾಸ್ ಕೌಜಗೇರಿ, ಶೇಕಪ್ಪ ಬೆಟಿಗೇರಿ, ಪುಷ್ಪ ಮೇಸ್ತ್ರಿ, ಸುಮಂಗಲ ಕೊತಬಾಳ, ಸುಮಾ ಲಾಚನಕೇರಿ, ಕುಸುಮ ಶಿವಪುರ, ಶರಣಮ್ಮ ಹೊಸ ಬಂಡಿಹರ್ಲಾಪುರ, ಲಲಿತಾ ಬೂದುಗುಂಪಿ, ಪದ್ಮ ಹುಲಿಗಿ, ನೇತ್ರಾವತಿ ಹಾಸಗಲ ಇತರರಿದ್ದರು.