ಹತ್ತಾರು ವರ್ಷದ ಮರ ಕಟಾವು

district koppal mhps school tree cutting
Published on

ಕೊಪ್ಪಳ: ನಗರದ ಶಾಸಕರ ಮಾದರಿ ಶಾಲೆಯಲ್ಲಿ ಹೊಸ ಕಟ್ಟಡ ಕಾಮಗಾರಿ ಹೆಸರಲ್ಲಿ 32 ವಿವಿಧ ಜಾತಿಯ ಮರಗಳನ್ನು ಶುಕ್ರವಾರ ಕತ್ತರಿಸಲಾಯಿತು.

ಸುಮಾರು 30&35 ವರ್ಷದ ಮರಗಳು ಶಾಲಾ ಆವರಣವನ್ನು ತಂಪುಗೊಳಿಸಿದ್ದವು. 10 ಕೋಟಿ ರೂ.ನಲ್ಲಿ ಹೊಸ ಕಟ್ಟಡ ಕಾಮಗಾರಿ ಕೈಗೊಳ್ಳಲು ಶಿಕ್ಷಣ ಇಲಾಖೆ ಮುಂದಾಗಿದೆ. ಕಾಮಗಾರಿಗೆ ಅಡ್ಡಿಯಾಗಲಿವೆ ಎಂದು ಬಾದಾಮಿ, ಬೇವು, ಸುಬಾಬುಲ್​, ಸಿಸ್ಸು, ಅಶೋಕ, ಅಂಟವಾಳ, ಅರಳಿ, ರೇನ್​ ಟ್ರೀ ಜಾತಿ ಸೇರಿ ವಿವಿಧ ಜಾತಿಯ 32 ಮರಗಳನ್ನು ಕಡಿಯಲು ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ. ಟೆಂಡರ್​ ಪಡೆದವರು ಶುಕ್ರವಾರ ಶಾಲಾ ಅವಧಿಯಲ್ಲಿಯೇ ಮರ ಕತ್ತರಿಸಿದರು. ಹಲವು ವರ್ಷಗಳಿಂದ ನೆರಳಾಗಿದ್ದ ಮರಗಳನ್ನು ಕಡಿಯುವುದನ್ನು ಕಂಡು ಜನರು ಬೇಸರ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net