

ಕೊಪ್ಪಳ: ನಗರದ ಜಿಲ್ಲಾಸ್ಪತ್ರೆಯಲ್ಲಿ ಒಂದು ವಾರದಲ್ಲಿ ಇಬ್ಬರು ಬಾಣಂತಿಯರ ಸಾವಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ಅಖಿಲ ಭಾರತ ಮಹಿಳಾ ಸಾಂಸತಿಕ ಸಂಟನೆ ಜಿಲ್ಲಾ ಪದಾಧಿಕಾರಿಗಳು ಗುರುವಾರ ಎಡಿಸಿ ಸಿದ್ರಾಮೇಶ್ವರಗೆ ಮನವಿ ಸಲ್ಲಿಸಿದರು.
ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಬಾಣಂತಿ ಸಾವಾಗುತ್ತಿದೆ. ನವ ಜಾತ ಶಿಶುಗಳ ಮರಣವೂ ಹೆಚ್ಚಿದೆ. ಒಂದು ವಾರದಲ್ಲಿ ಇಬ್ಬರು ತಾಯಂದಿರ ಸಾವಾಗಿರುವುದು ಶೋಚನೀಯ. ಆಡೂರಿನ ರೇಣುಕಾ ಎಂಬುವವರಿಗೆ ಕುಷ್ಟಗಿಯಲ್ಲಿ ಸರಿಯಾದ ಚಿಕಿತ್ಸೆ ಸಿಕ್ಕಿಲ್ಲ ಎಂಬ ಆರೋಪವಿದೆ. ಬಡ, ಮಧ್ಯಮ ವರ್ಗದ ಜನರೇ ಹೆಚ್ಚಾಗಿ ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ. ಅವರ ಪ್ರಾಣ ರಕ್ಷಣೆ ಆಗದಿದ್ದರೆ ಹೇಗೆಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಬಾಣಂತಿಯರ ಸಾವಿನ ತನಿಖೆ ಗಂಭೀರವಾಗಿ ನಡೆಸಬೇಕು. ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ ತಾಯಂದಿರ ಮರಣದ ಬಗ್ಗೆ ತನಿಖೆ ನಡೆಸಿ ವರದಿ ಪಡೆಯಬೇಕು. ತಪು$್ಪಗಳಾಗಿದ್ದಲ್ಲಿ ಅಂಥವರ ವಿರುದ್ಧವೂ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ಸಂಟನೆ ಪದಾಧಿಕಾರಿಗಳಾದ ಮಂಜುಳಾ ಮಜ್ಜಿಗಿ, ಶಾರದಾ ಗಡ್ಡಿ, ಹುಸೇನ್ ಬಿ, ಸುಮಯ್ಯ ಇದ್ದರು.