ಸರ್ಕಾರಿ ಕಾರಿಗೆ ಕಲ್ಲು ತೂರಿದ ಮಾನಸಿಕ ಅಸ್ವಸ್ಥ

IMG_20250917_083727
Published on

ಕೊಪ್ಪಳ: ನಗರದಲ್ಲಿ ಬೆಳ್ಳಂಬೆಳಗ್ಗೆ ಮಾನಸಿಕ ಅಸ್ವಸ್ಥ ಹುಚ್ಚಾಟ ಮೆರೆದಿದ್ದಾನೆ.

ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ಸಿಕ್ಕ ಸಿಕ್ಕವರಿಗೆ ಕಲ್ಲು ತೂರುತ್ತಿದ್ದಾನೆ. ಪಾರ್ಕಿಂಗ್ ನಲ್ಲಿ ನಿಂತಿದ್ದ ಸರ್ಕಾರಿ ಕಾರಿಗೆ ಕಲ್ಲಿನಿಂದ‌ ಹೊಡೆದು ಗಾಜು ಪುಡಿಪುಡಿ ಮಾಡಿದ. ಮತ್ತೊಂದು ಕಲ್ಲು ಜನರತ್ತ ತೂರಿದ್ದು, ಅದೃಷ್ಟವಶಾತ್ ಯಾರಿಗೂ ಬಿದ್ದಿಲ್ಲ. ಸ್ಥಿಮಿತ ಕಳೆದುಕೊಂಡಿದ್ದು ಕೈಯಲ್ಲಿ ಕಲ್ಲು ಹಿಡಿದು ಎಲ್ಲರನ್ನು ಎದುರಿಸುತ್ತಿದ್ದಾನೆ. ಹೆದರಿದ ಜನರು ಅತ್ತಿಂದಿತ್ತ ಓಡಾಡಿದರು. ಸಂಬಂಧಿಸಿದ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆಯಬೇಕು. ಚಿಕಿತ್ಸೆ ಕೊಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net