ಕನ್ಯಕಾಪರಮೇಶ್ವರಿ ಜಯಂತಿ ಸರ್ಕಾರದಿಂದ ಆಚರಿಸಿ

memorandum submit by aryavaisya community members
ಕನ್ಯಕಾಪರಮೇಶ್ವರಿ ಜಯಂತಿ ಸರ್ಕಾರದಿಂದ ಆಚರಿಸುವಂತೆ ಒತ್ತಾಯಿಸಿ ಆರ್ಯವೈಶ್ಯ ಸಮುದಾಯ ಪದಾಧಿಕಾರಿಗಳು ಶುಕ್ರವಾರ ಕೊಪ್ಪಳದಲ್ಲಿ ಎಡಿಸಿ ಸಾವಿತ್ರಿ ಕಡಿಗೆ ಮನವಿ ಸಲ್ಲಿಸಿದರು. ಆರ್ಯವೈಶ್ಯ ಸಂದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ರಾವೇಂದ್ರ ಪಾನಂಟಿ, ನಾರಾಯಣ ಕುರಗೋಡ, ಗುರುರಾಜ, ರಾಕೇಶ ಪಾನಂಟಿ, ರಾವೇಂದ್ರ ಚಿತ್ರಾಲಿ, ಆನಂದ ಶಿರಹಟ್ಟಿ ಇದ್ದರು.
Published on

ಕೊಪ್ಪಳ: ಆರ್ಯವೈಶ್ಯ ಕುಲದೇವತೆ ಶ್ರೀ ವಾಸವಿ ಕನ್ಯಕಾಪರಮೇಶ್ವರಿ ಅಮ್ಮನವರ ಜಯಂತಿ ಸರ್ಕಾರದಿಂದ ಆಚರಿಸುವಂತೆ ಒತ್ತಾಯಿಸಿ ಆರ್ಯವೈಶ್ಯ ಸಮುದಾಯದ ವಿವಿಧ ಸಂಟನೆಗಳ ಮುಖಂಡರು ಶುಕ್ರವಾರ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಮೇ 18ರಂದು ಸಮುದಾಯದಿಂದ ವಾಸವಿ ಅಮ್ಮನವರ ಜಯಂತಿ ಆಚರಿಸುತ್ತಿದ್ದೇವೆ. ವಾಸವಿ ಮಾತೆ ತ್ಯಾಗ, ಪವಿತ್ರತೆ ಸಾರ ಜಗತ್ತಿಗೆ ತಿಳಿಸಲು ಭೂಲೋಕದಲ್ಲಿ ಅವತರಿಸಿದ್ದಾಳೆ. ದೇಹಾಭಿಮಾನ ತ್ಯಾಗ ಮಾಡಿ, ಆತ್ಮಾಭಿಮಾನಗಳಾಗಬೇಕೆಂಬುದು ಅವರ ಜನ್ಮದ ಉದ್ದೇಶ. ಆರ್ಯವೈಶ್ಯ ಸಮುದಾಯದ ಕುಲದೇವತೆಯ ಜಯಂತಿಯನ್ನು ಸಮುದಾಯದಿಂದ ಆಚರಿಸಲಾಗುತ್ತಿದೆ. ಸರ್ಕಾರ ವಿವಿಧ ಮಹನೀಯರ ಜಯಂತಿ ಆಚರಿಸುತ್ತಿದೆ.

ಅದರಂತೆ ಆರ್ಯವೈಶ್ಯ ಸಮುದಾಯ ಕುಲ ದೇವತೆ ವಾಸವಿ ಕನ್ಯಕಾಪರಮೇಶ್ವರಿ ಅಮ್ಮನವರ ಜಯಂತಿಯನ್ನು ಸರ್ಕಾರದಿಂದ ಆಚರಿಸಬೇಕು. ನಮ್ಮ ಮನವಿ ಪರಿಗಣಿಸಿ ಸರ್ಕಾರಿ ಕಾರ್ಯಕ್ರಮವೆಂದು ಘೋಷಿಸಬೇಕು. ಅಧಿಕೃತವಾಗಿ ಪ್ರಕಟಣೆ ಹೊರಡಿಸಬೇಕು ಎಂದು ಒತ್ತಾಯಿಸಿದರು. ಆರ್ಯವೈಶ್ಯ ಸಂದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ರಾವೇಂದ್ರ ಪಾನಂಟಿ, ನಾರಾಯಣ ಕುರಗೋಡ, ಗುರುರಾಜ, ರಾಕೇಶ ಪಾನಂಟಿ, ರಾವೇಂದ್ರ ಚಿತ್ರಾಲಿ, ಆನಂದ ಶಿರಹಟ್ಟಿ, ಅರುಣ ಶೆಟ್ಟರ, ಗಿರೀಶ ಪಾನಂಟಿ, ರಮೇಶ ಬಾಬು, ಆಂಜನೇಯ ಬೇಳೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net