ಗಂಗಾವತಿ ವೃದ್ಧನ ಮೇಲೆ ಹಲ್ಲೆ ಮಾಡಿದವರ ಬಂಧನಕ್ಕೆ ಆಗ್ರಹ

District koppal memorandum sp koppal leaders muslim man hit by youths gangavathi
memorandum sp koppal leaders muslim man hit by youths gangavathi
ಹುಸೇನ್​ಸಾಬ್​ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಿವಿಧ ಸಂಟನೆಗಳ ಮುಖಂಡರು ಶನಿವಾರ ಕೊಪ್ಪಳದಲ್ಲಿ ಎಸ್ಪಿ ಯಶೋದಾ ವಂಟಗೋಡಿಗೆ ಮನವಿ ಸಲ್ಲಿಸಿದರು. ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರು. ಬಸವರಾಜ ಶೀಲವಂತರ, ಎಸ್​.ಎ.ಗಫಾರ್​, ಸಲೀಂ ಅಳವಂಡಿ, ಹುಲುಗಪ್ಪ ಅಕ್ಕಿರೊಟ್ಟಿ, ನಿಂಗು ಜಿ.ಎಸ್​., ಕೆ.ಬಿ.ಗೋನಾಳ, ಗಾಳೆಪ್ಪ ಮುಂಗೋಲಿ ಇದ್ದರು.
Published on

ಕೊಪ್ಪಳ:ಗಂಗಾವತಿ ನಿವಾಸಿ ಹುಸೇನ್​ ಸಾಬ್​ ಮೇಲೆ ಹಲ್ಲೆ ಮಾಡಿ ಹಣ ದೋಚಿ, ಜೈ ಶ್ರೀರಾಮ್​ ಘೋಷಣೆ ಕೂಗುವಂತೆ ಒತ್ತಾಯಿಸಿದ ದುರುಳರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳವಂತೆ ಒತ್ತಾಯಿಸಿ ವಿವಿಧ ಸಂಟನೆಗಳ ಮುಖಂಡರು ಶನಿವಾರ ಎಸ್ಪಿ ಯಶೋದಾ ವಂಟಗೋಡಿಗೆ ಮನವಿ ಸಲ್ಲಿಸಿದರು.

ವೃದ್ಧ ಹುಸೇನ್​ ಸಾಬ್​ನನ್ನು ಬಲವಂತವಾಗಿ ಕರೆದೊಯ್ದು ಹಿಂಸಿಸಿದ್ದಾರೆ. ಅಲ್ಲದೇ ಮುಸ್ಲಿಂರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು, ಜೈ ಶ್ರೀರಾಮ್​ ಘೋಷಣೆ ಕೂಗುವಂತೆ ಒತ್ತಾಯಿಸಿದ್ದಾರೆ.

ಹಿಂದು&ಮುಸ್ಲಿಂ ಗಲಭೆಗೆ ಪ್ರಚೋದನೆ ನೀಡಿದ್ದಾರೆ. ಕೋಮುವಾದಿಗಳು ಅವರ ಬಳಿ ಹಣ ಕಿತ್ತುಕೊಂಡು ಗಡ್ಡಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಇದೊಂದು ಸೂಕ್ಷ$್ಮ ವಿಷಯವಾಗಿದ್ದು, ಅವರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದರು.

ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರು. ಬಸವರಾಜ ಶೀಲವಂತರ, ಎಸ್​.ಎ.ಗಫಾರ್​, ಸಲೀಂ ಅಳವಂಡಿ, ಹುಲುಗಪ್ಪ ಅಕ್ಕಿರೊಟ್ಟಿ, ನಿಂಗು ಜಿ.ಎಸ್​., ಕೆ.ಬಿ.ಗೋನಾಳ, ಗಾಳೆಪ್ಪ ಮುಂಗೋಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net