ವಸತಿ ರಹಿತರಿಗೆ ನಿವೇಶನ ನೀಡಿ

district koppal memorandum mla hitnala
Published on

ಕೊಪ್ಪಳ : ಕ್ಷೇತ್ರದ ನಿವೇಶನ ರಹಿತರಿಗೆ ವಸತಿ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿ ಪದಾಧಿಕಾರಿಗಳು ಗುರುವಾರ ಶಾಸಕ ರಾವೇಂದ್ರ ಹಿಟ್ನಾಳಗೆ ಮನವಿ ಸಲ್ಲಿಸಿದರು.

ದುಡಿವ ಕೈಗಳಿಗೆ ಉದ್ಯೋಗ, ಹೊಟ್ಟೆ ತುಂಬ ಊಟ, ನೆಮ್ಮದಿಯಿಂದ ನಿದ್ರಿಸಲು ಸ್ವಂತ ಸೂರು ಹೊಂದುವುದು ಎಲ್ಲರ ಹಕ್ಕು. ಆಳುವ ಸರ್ಕಾರಗಳು ಜನರಿಗೆ ಉದ್ಯೋಗ ನೀಡದೆ ಹೊಟ್ಟೆ ತುಂಬಾ ಅನ್ನ ಸಿಗದಂತೆ ಮಾಡಿವೆ. ಇಂದಿಗೂ ಅನೇಕರು ಹಸಿವಿನಿಂದ, ಸೂರು ಇಲ್ಲದೇ ಬದುಕುವ ನಿದರ್ಶನಗಳಿವೆ. ಕೊಪ್ಪಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಿವಿಧ ಕಾರ್ಮಿಕರು, ಬಡ ರೈತರಿಗೆ ನಿವೇಶನಗಳಿಲ್ಲ. ಅಂಥವರ ಸಮೀೆ ನಡೆಸಿ. ಅರ್ಹರಿಗೆ, ನಿವೇಶನ ಮತ್ತು ವಸತಿ ಕಲ್ಪಿಸುವಂತೆ ಒತ್ತಾಯಿಸಿದರು.

ಹೋರಾಟ ಸಮಿತಿ ಅಧ್ಯಕ್ಷ ಎಸ್​.ಎ.ಗಫಾರ್​, ಉಪಾಧ್ಯಕ್ಷ ಮೌಲಾ ಹುಸೇನ್​ ಹಣಗಿ, ಕಾರ್ಯದರ್ಶಿ ತುಕಾರಾಂ ಪಾತ್ರೋಟಿ, ಪ್ರಕಾಶ ದೇವರಮನಿ, ಸುರೇಶ ಓಜನಹಳ್ಳಿ, ಶ್ರೀದೇವಿ, ಗೀತಾ ಮದಕಟ್ಟಿ, ಸಿದ್ದಮ್ಮ, ಸಾಧಿಕ್​, ಧರ್ಮಣ್ಣ, ನಾಗರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net