ಮಕ್ಕಳ ಅಸಹಜ ಸಾವು ತಡೆಗಟ್ಟಿ

district koppal memorandum dc naleen athul
Published on

ಕೊಪ್ಪಳ: ರಾಜ್ಯದಲ್ಲಿ ಮಕ್ಕಳ ಅಸಹಜ ಸಾವು ಹೆಚ್ಚುತ್ತಿದ್ದು, ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅಖಿಲ ಭಾರತ ಮಹಿಳಾ ಸಾಂಸತಿಕ ಸಂಘಟನೆ ಜಿಲ್ಲಾ ಪದಾಧಿಕಾರಿಗಳು ಬುಧವಾರ ಡಿಸಿ ನಲಿನ್​ ಅತುಲ್​ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಮೂರು ವರ್ಷದಲ್ಲಿ 5,880 ಮಕ್ಕಳು ಅಸಹಜವಾಗಿ ಸಾವನ್ನಪ್ಪಿವೆ. ಇದೊಂದು ಆಘಾತಕಾರಿ ವಿಷಯ. ಬೆಂಗಳೂರಿನಲ್ಲೇ ಅಧಿಕ ಪ್ರಕರಣಗಳು ವರದಿಯಾಗಿವೆ. ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಆರು ತಿಂಗಳಲ್ಲಿ 111 ನವಜಾತ ಶಿಶುಗಳು ಮೃತಪಟ್ಟಿವೆ. ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯವಾಗಿ ಸತ್ತಿದ್ದು ಆರೋಗ್ಯ ವ್ಯವಸ್ಥೆ ಹದಗೆಟ್ಟಿರುವುದಕ್ಕೆ ಕೈಗನ್ನಡಿ ಎಂದು ಆರೋಪಿಸಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಇಂದಿಗೂ ಅವಶ್ಯಕತೆಗೆ ಅನುಗುಣವಾಗಿ ವೈದ್ಯರು, ವೈದ್ಯಕಿಯ ಸಿಬ್ಬಂದಿ, ಮೂಲಭೂತ ಸೌಲಭ್ಯಗಳಿಲ್ಲ. ಆರೋಗ್ಯಕ್ಕಾಗಿ ಸರ್ಕಾರಿ ಆಸ್ಪತ್ರೆಗಳನ್ನು ಅರಸಿಕೊಂಡು ಬರುವ ಬಡವರ ಪಾಲಿಗೆ ಅವುಗಳೇ ಸಾವಿನ ಕೂಪಗಳಾಗುತ್ತಿವೆ. ಪರಿಸ್ಥಿತಿ ಹೀಗಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಸರ್ಕಾರ ರ್ನಿಲಕ್ಷ$್ಯ ತೋರುತ್ತಿದೆ ಎಂದು ಖಂಡಿಸಿದರು.

ಕೂಡಲೇ ಮಕ್ಕಳ ಅಸಹಜ ಸಾವುಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು. ಬೆಳಗಾವಿ ಶಿಶುಗಳ ಸಾವಿನ ಸೂಕ್ತ ತನಿಖೆ ನಡೆಸಿ. ತಪ್ಪೆಸಗಿದವರಿಗೆ ಕಠಿಣ ಶಿೆ ವಿಧಿಸಿ. ಸರ್ಕಾರಿ ಆಸ್ಪತ್ರೆಗಳಿಗೆ ಬೇಡಿಕೆ ಅನುಸಾರ ವೈದ್ಯರು, ಸಿಬ್ಬಂದಿ, ಮೂಲ ಸೌಕರ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು. ಸಂದ ಜಿಲ್ಲಾ ಸಂಟಕರಾದ ಮಂಜುಳಾ ಮಜ್ಜಿಗಿ, ಶಾರದಾ ಗಡ್ಡಿ, ಹುಸೇನ್​ ಬಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net