ಧ್ಯಾನದಿಂದ ಶಾಂತಿ ಕಾಪಾಡಬಹುದು

district koppal meditation iswari vv
Published on

ಕೊಪ್ಪಳ: ಸದ್ಯ ವಿಶ್ವಕ್ಕೆ ಶಾಂತಿ ಅವಶ್ಯವಿದೆ. ಧ್ಯಾನದಿಂದ ಶಾಂತಿ ನೆಲೆಸಲು ಸಾಧ್ಯ ಎಂದು ಪ್ರಜಾಪಿತ ಬ್ರಹ್ಮ ಕುಮಾರಿ ಯೋಗಿನಿ ಅಕ್ಕ ಹೇಳಿದರು.

ನಗರದ ಈಶ್ವರಿಯ ವಿವಿಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಧ್ಯಾನ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಗತ್ತಿನಲ್ಲಿ ದಿನದಿಂದ ದಿನಕ್ಕೆ ಒತ್ತಡ, ದು@ಖ,ಚಿಂತೆ, ಭಯ, ಅಶಾಂತಿ ಹೆಚ್ಚುತ್ತಿದೆ. ಪರಿಣಾಮ ಮನುಷ್ಯ ಶಾಂತಿ, ನೆಮ್ಮದಿ ಹುಡುಕುತ್ತಿದ್ದಾನೆ. ಹಣದಿಂದ ಒಡವೆ, ವಸ್ತ್ರ, ಸಾಮಗ್ರಿ ಖರೀದಿಸಬಹುದು. ಆದರೆ, ಶಾಂತಿ, ನೆಮ್ಮದಿ ಕೊಳ್ಳಲು ಆಗುವುದಿಲ್ಲ. ಅದನ್ನು ಪಡೆಯಲು ಧ್ಯಾನವೊಂದೇ ಉತ್ತಮ ಮಾರ್ಗ. ಮನಸ್ಸಿನ ಆಲೋಚನೆಗಳನ್ನು ನಕಾರಾತ್ಮಕತೆಯಿಂದ ಸಕಾರಾತ್ಮಕತೆಗೆ ಪರಿವರ್ತಿಸುವುದೇ ಧ್ಯಾನ. ಇದೊಂದು ಮನಸ್ಸಿನ ವ್ಯಾಯಾಮ. ಮೆಡಿಟೇಷನ್​ ಮಾಡುವುದರಿಂದ ಮನಸ್ಸು ಶಕ್ತಿಶಾಲಿ ಆಗಲಿದೆ. ಎಂಥ ಪರಿಸ್ಥಿತಿಯಲ್ಲೂ ಸಮಚಿತ್ತದಿಂದ ಇರಲು ನೆರವಾಗಲಿದೆ ಎಂದರು.

ವಿವಿಧ ಗಣ್ಯರು ಅನಿಸಿಕೆ ಹಂಚಿಕೊಂಡರು. ಒಂದು ಗಂಟೆ ಸಾಮೂಹಿಕ ಧ್ಯಾನ ನೆರವೇರಿತು. ಬ್ಯಾಂಕ್​ ಮ್ಯಾನೇಜರ್​ ಮನೋಹರ್​, ವ್ಯಾಪಾರಸ್ಥರಾದ ಭೀಮಣ್ಣ, ಬಸವರಾಜ್​ ಹಿಟ್ಲಿ, ಸೋಮಣ್ಣ ಚಿನ್ನೂರು, ಪ್ರಮುಖರಾದ ಸುಜಾತ, ಅಂಜಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net