

ಕೊಪ್ಪಳ: ಎಸ್ಸಿ&ಎಸ್ಟಿ ವರ್ಗದ ಪತ್ರಕರ್ತರಿಗೆ ಸಚಿವ ಶಿವರಾಜ ತಂಗಡಗಿ ಶನಿವಾರ ಕೊಪ್ಪಳದಲ್ಲಿ ಮಾಧ್ಯಮಕಿಟ್ ವಿತರಿಸಿದರು.
2024&25ನೇ ಸಾಲಿನ ಎಸ್ಸಿಪಿ&ಟಿಎಸ್ಪಿ ಯೋಜನೆಯಡಿ ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಮಾಧ್ಯಮ ಮಾನ್ಯತೆ ಪಡೆದ ಎಸ್ಸಿ&ಎಸ್ಟಿ ಪತ್ರಕರ್ತರಿಗೆ ಕಿಟ್ ನೀಡಲಾಯಿತು. ವೃತ್ತಿಪರ ಚಟುವಟಿಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಲ್ಯಾಪ್ಟಾಪ್ ಮತ್ತು ಕ್ಯಾಮೆರಾ ವಿತರಿಸಲಾಯಿತು. ವಾರ್ತಾ ಇಲಾಖೆಯಿಂದ ಹೊರತಂದ ಕೊಪ್ಪಳ ಜಿಲ್ಲೆಯ ಗ್ಯಾರಂಟಿ ಯೋಜನೆಗಳ ಸಮಗ್ರ ಮಾಹಿತಿ ಒಳಗೊಂಡ ಕಿರು ಹೊತ್ತಿಗೆಯನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು.
ಸಂಸದ ರಾಜಶೇಖರ ಹಿಟ್ನಾಳ, ಡಿಸಿ ನಲಿನ್ ಅತುಲ್, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಎಡಿಸಿ ಸಿದ್ರಾಮೇಶ್ವರ, ಡಿಯುಡಿಸಿ ಪಿಡಿ ರೇಷ್ಮಾ ಹಾನಗಲ್, ವಾರ್ತಾಧಿಕಾರಿ ಡಾ.ಸುರೇಶ ಜಿ. ಇತರರಿದ್ದರು.