ಮಾಯಮ್ಮಗೆ ಜಗಜೀವನರಾಮ್​ ಪ್ರಶಸ್ತಿ

district koppal mayamma babu jagajeevan ram jayanthi celbration award
Published on

ಕೊಪ್ಪಳ: ಡಾ.ಬಾಬು ಜಗಜೀವನ್​ರಾಮ್​ ಅವರ ಜನ್ಮ ದಿನ ಅಂಗವಾಗಿ ಕೊಡಮಾಡುವ 2023ನೇ ಸಾಲಿನ ಪ್ರಶಸ್ತಿಗೆ ಗಂಗಾವತಿ ನಗರಸಭೆ ಪೌರ ಕಾರ್ಮಿಕಳಾದ ಮಾಯಮ್ಮ ಆಯ್ಕೆಯಾಗಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ 2023, 2024 ಮತ್ತು 2025ನೇ ಸಾಲಿನ ಪ್ರಶಸ್ತಿ ಪಟ್ಟಿ ಘೋಷಿಸಿದೆ. ಒಟ್ಟು 15 ಜನರಿಗೆ ಪ್ರಶಸ್ತಿ ಸಂದಿದ್ದು, 2023ನೇ ಸಾಲಿನಲ್ಲಿ ಕಲಬುರ್ಗಿ ವಿಭಾಗದಲ್ಲಿ ಮಾಯಮ್ಮ ಅವರಿಗೆ ಪ್ರಶಸ್ತಿ ಒಲಿದಿದೆ. ಕಳೆದ 25 ವರ್ಷದಿಂದ ಮಾಯಮ್ಮ ಗಂಗಾವತಿ ನಗರಸಭೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗುತ್ತಿಗೆ ಪದ್ಧತಿ ವಿರೋಧಿಸಿ 2018ರಲ್ಲಿ ನಡೆದ 42 ದಿನಗಳ ನಿರಂತರ ಹೋರಾಟದಲ್ಲಿ ಭಾಗಿಯಾಗಿ ಗಮನ ಸೆಳೆದಿದ್ದಾರೆ. ಲವಾಗಿ ಸರ್ಕಾರ ನೇರ ನೇಮಕಾತಿ ಮೂಲಕ ಪೌರ ಕಾರ್ಮಿಕರನ್ನು ನೇಮಿಸಿಕೊಂಡಿದೆ. ಹೆಚ್ಚುವರಿ ಇದ್ದವರನ್ನು ಕೊಪ್ಪಳಕ್ಕೆ ನಿಯೋಜಿಸಲಾಗಿದೆ. ಜಾತಿ, ಲಿಂಗ ಹಾಗೂ ವರ್ಗ ಭೇದ ನಡುವೆಯೂ ಹೋರಾಟ ಮುನ್ನಡೆಸುತ್ತಿದ್ದಾರೆ. ಪೌರ ಕಾರ್ಮಿಕರ ಹಕ್ಕುಗಳಿಗಾಗಿ ನಡೆವ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net