

ಕೊಪ್ಪಳ: ಮಕ್ಕಳ ಕಲಿಕಾಮಟ್ಟ ಅರಿತುಕೊಳ್ಳಿ. ಅವರಿಗೆ ಅರ್ಥವಾಗುವಂತೆ ಪಾಠ ಮಾಡಿ ಎಂದು ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಸೂಚಿಸಿದರು.
ನಗರದ ಜಿಪಂ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗಣಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಗಣಿತ ವಿಷಯ ಪ್ರಮುಖವಾದುದು. ಮಕ್ಕಳಿಗೆ ವಿಷಯದಲ್ಲಿ ಆಸಕ್ತಿ ಬರುವಂತೆ ಪಾಠ ಮಾಡಬೇಕು. ಚಟುವಟಿಕೆಗಳ ಮೂಲಕ ಆಸಕ್ತಿ ಮೂಡುವಂತೆ ತಿಳಿ ಹೇಳಿ. ಮಕ್ಕಳಿಗೆ ಅನುಕೂಲವಾಗುವ ಮಾದರಿ, ತಂತ್ರಗಳನ್ನು ಅಳವಡಿಸಿಕೊಳ್ಳಿ. ಪರಿಣಾಮಕಾರಿಯಾಗಿ ಬೋಧಿಸಿದಾಗ ಕಲಿಕಾ ಮಟ್ಟ ಹೆಚ್ಚಿಸಲು ಸಾಧ್ಯವಾಗಲಿದೆ ಎಂದರು.
ಅಕ್ಷರ ೌಂಡೇಶನ್ ಪ್ರೋಗ್ರಾಂ ಮ್ಯಾನೇಜರ್ ಎಚ್.ಬಿ.ಕಣ್ಣಿ ಮಾತನಾಡಿ, ನಮ್ಮ ೌಂಡೇಶನ್ನಿಂದ ಮಕ್ಕಳ ಗಣಿತ ಕಲಿಕೆ ಯೋಜನೆ ಕೈಗೆತ್ತಿಕೊಂಡಿತು. ಸರ್ಕಾರ ಅದನ್ನು ಮನಗಂಡು ರಾಜ್ಯಾದ್ಯಂತ ವಿಸ್ತರಿಸಿದೆ. ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಗಣಿತ ವಿಷಯವನ್ನು ಸರಳೀಕರಣಗೊಳಿಸಲು ಚಟುವಟಿಕೆ ಆಧಾರಿತ ಮತ್ತು ಕಲಿಕೆಗೆ ಪೂರಕವಾಗುವ 22 ಪರಿಕರಗಳ ಕಿಟ್ಗಳನ್ನು ಶಾಲೆಗೆ ವಿತರಿಸಲಾಗಿದೆ. ಮೂರು ಹಂತಗಳಲ್ಲಿ ಯೋಜನೆ ಜಾರಿ ಮಾಡಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ 150 ಗ್ರಾಪಂ ಮಟ್ಟದ ಗಣಿತ ಸ್ಪರ್ಧೆಗಳನ್ನು ನಡೆಸಲಾಗಿದೆ. 4ರಿಂದ 6ನೇ ತರಗತಿವರೆಗಿನ 23,000ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದಾರೆಂದರು.
ಡಿಡಿಪಿಐ ಶ್ರೀಶೈಲ ಬಿರಾದಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂದ ಜಿಲ್ಲಾಧ್ಯಕ್ಷ ಶರಣಬಸನಗೌಡ ಪಾಟೀಲ್, ಉಪನ್ಯಾಸಕ ಗವಿಸಿದ್ದೇಶ್ವರ ಸ್ವಾಮಿ, ನಾಗರಾಜ ವೆಂಕಟಾಪೂರ, ಅಡಿವೇಶ ನೀರಲಕೇರಿ ಇತರರಿದ್ದರು.