ಭಾಗ್ಯನಗರ ಮಾರುತೇಶ್ವರ ಜಾತ್ರೆ ಅದ್ದೂರಿ

Maruteshwar jaatra in Bhagyaagara town koppal
ಕೊಪ್ಪಳ ತಾಲೂಕಿನ ಭಾಗ್ಯನರಗದಲ್ಲಿ ಮಾರುತೇಶ್ವರ ಜಾತ್ರೆ ಅಂಗವಾಗಿ ಮಂಗಳವಾರ ಭಕ್ತರು ಮುಳ್ಳು ಕಂಟಿಗೆ ಹಾರಿ ಭಕ್ತಿ ಮೆರೆದರು.
Published on

ಕೊಪ್ಪಳ: ಯಗಾದಿ ಅಂಗವಾಗಿ ತಾಲೂಕಿ ಭಾಗ್ಯನಗರದ ಮಾರುತೇಶ್ವರ ಜಾತ್ರೋತ್ಸವ ಅದ್ದೂರಿಯಾಗಿ ನೆರವೇರಿತು. ಗ್ರಾಮದಲ್ಲಿ ಉತ್ಸವ ಮೂರ್ತಿ ಮೆರವಣಿಗೆ ನಡೆಸಲಾಯಿತು.

ಮುಳ್ಳು ಕಂಟಿಯೊಂದಿಗೆ ಸಾಗಿದ ಭಕ್ತರು ಒಂದೆಡೆ ಗುಡ್ಡೆ ಹಾಕಿದರು. ಯುವಕರು ಸೇರಿ ಹರಕೆ ಹೊತ್ತ ಭಕ್ತರು ಮುಳ್ಳು ಕಂಟಿಯಲ್ಲಿ ಹಾರುವುದು, ಉರುಳಾಡುವುದು ಮಾಡುವ ಮೂಲಕ ಭಕ್ತಿ ಮೆರೆದರು. ಮಂಗಳವಾರ ಜರುಗಿದ ರಥೋತ್ಸವ ವೇಳೆ ವರ್ಷದ ಮೊದಲ ಮಳೆ ಸಿಂಚನವಾಗಿದ್ದು ಭಕ್ತರಲ್ಲಿ ಹರ್ಷ ತಂದಿತು. ಸಾವಿರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net