ಜಾತಿ,ಮತ,ಪಂಥ ಮೀರಿ ಬೆಳೆಯಬೇಕು:ಬೆಟ್ಟದೂರು

martyrs day celebration in koppal fighters were participated in mass
ಕೊಪ್ಪಳದಲ್ಲಿ ವಿವಿಧ ಸಂಟನೆಗಳ ಮುಖಂಡರು ಮಂಗಳವಾರ ಹುತಾತ್ಮರ ದಿನಾಚರಣೆ ಮಾಡಿದರು. ಪ್ರಮುಖರಾದ ಅಲ್ಲಮಪ್ರಭು ಬೆಟ್ಟದೂರು, ಬಸವರಾಜ ಶೀಲವಂತರ, ಮಹಾಂತೇಶ ಕೊತಬಾಳ, ಎಸ್​.ಎ.ಗಾರ್​, ತುಕಾರಾಮ್​ ಪಾತ್ರೋಟಿ, ಮೌಲಾಸಾಬ್​ ಕಪಾಲಿ, ಗಾಳೆಪ್ಪ ಮುಂಗೋಲಿ, ಕಾಸಿಂ ಸರ್ದಾರ ಇದ್ದರು.
Published on

ಕೊಪ್ಪಳ: ಮನುಷ್ಯ ಜಾತಿ, ಮತ, ಪಂಥ ಮೀರಿ ಬೆಳೆದಾಗ ದೇಶ ಉಳಿಸಲು ಸಾಧ್ಯ ಎಂದು ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.

ಹುತಾತ್ಮ ದಿನಾಚರಣೆ ಅಂಗವಾಗಿ ನಗರದ ಅಶೋಕ ವೃತ್ತದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆ ಉದ್ದೇಶಿಸಿ ಮಾತನಾಡಿದರು.

ಗಾಂಧೀಜಿಯನ್ನು ಹತ್ಯೆಗೈದ ಕೋಮುವಾದಿ ಶಕ್ತಿಗಳು ವಿಚಾರವಂತರನ್ನು ಕೊಲ್ಲುತ್ತಿದ್ದಾರೆ. ಗೌರಿ ಲಂಕೇಶ, ಎಂ.ಎಂ.ಕಲಬುರ್ಗಿ, ಪಾನ್ಸರೆಯಂಥವರ ಹತ್ಯೆಯಾಗಿದೆ. ಜಾತಿ, ಮತ, ಪಂಥ ಮೀರಿ ಬೆಳೆಯಬೇಕು. ಸಂವಿಧಾನ ಉಳಿಕೆಗೆ ನಾವೆಲ್ಲ ಒಗ್ಗಟ್ಟಾಗಬೇಕು. ಕೋಮುವಾದಿಗಳನ್ನು ಮಣಿಸಲು ನಾವೆಲ್ಲ ಒಗ್ಗಟ್ಟಾಗಬೇಕು ಎಂದರು.

ಮಾನವ ಸರಪಳಿ ರಚಿಸಿ ಕೋಮುವಾದದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಗಾಂಧಿ ವೃತ್ತಕ್ಕೆ ತೆರಳಿ ಗಾಂಧೀಜಿ ಪ್ರತಿಮೆಗೆ ಹೂವಿನ ಹಾರ ಹಾಕಿ ನಮಿಸಿದರು. ಪ್ರಮುಖರಾದ ಬಸವರಾಜ ಶೀಲವಂತರ, ಮಹಾಂತೇಶ ಕೊತಬಾಳ, ಎಸ್​.ಎ.ಗಾರ್​, ತುಕಾರಾಮ್​ ಪಾತ್ರೋಟಿ, ಮೌಲಾಸಾಬ್​ ಕಪಾಲಿ, ಗಾಳೆಪ್ಪ ಮುಂಗೋಲಿ, ಕಾಸಿಂ ಸರ್ದಾರ, ಸುಂಕಪ್ಪ ಗದಗ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net