ಗಮನ ಸೆಳೆದ ಮಾವು ಮೇಳ, ಬಗೆ ಬಗೆ ಹಣ್ಣು ಪ್ರದರ್ಶನ, ಮಾರಾಟ

mango mela in koppal dc naleen athu, zp ceeo Rahul rtnam pandeya, sp yashodha vantagodi
ಮಾವು ಮೇಳದಲ್ಲಿ ಹಣ್ಣು ಸೇವಿಸಿದ ಡಿಸಿ ನಲಿನ್​ ಅತುಲ್​, ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ, ಎಸ್ಪಿ ಯಶೋದಾ ವಂಟಗೋಡಿ, ಎಡಿಸಿ ಸಾವಿತ್ರಿ ಕಡಿ.
Published on

ಕೊಪ್ಪಳ: ತೋಟಗಾರಿಕೆ ಇಲಾಖೆ ಆವರಣದಲ್ಲಿ ಇಲಾಖೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ ಗಮನ ಸೆಳೆಯಿತು. ಜಿಲ್ಲಾಧಿಕಾರಿ ನಲಿನ್​ ಅತುಲ್​ ಟೇಪ್​ ಕತ್ತರಿಸುವ ಮೂಲಕ ಮೇಳಕ್ಕೆ ಚಾಲನೆ ನೀಡಿದರು.

ಮೇ 21ವರೆಗೆ ಮೇಳ ನಡೆಯಲಿದೆ. 10-12 ತಳಿ ಮಾರಾಟ ಮಾಡಲಾಗುತ್ತಿದೆ. ಕೇಸರ, ದಶಹರಿ, ತೋತಾಪೂರಿ, ಮಲ್ಲಿಕಾ, ಬೆನೆಶಾನ್​, ಸಿಂಧೂರಿ, ಇಮಾಮ ಪಸಂದ, ಉಪ್ಪಿನಕಾಯಿ ತಳಿಗಳ ಪ್ರದರ್ಶನದ ಜತೆಗೆ ಮಾರಾಟ ಮಾಡಲಾಗುತ್ತಿದೆ. ಜತೆಗೆ ನೂರಕ್ಕೂ ಅಧಿಕ ತಳಿ ಮಾವು, ಉಪ ಉತ್ಪನ್ನಗಳು, ಪುನಾಸ್​ ಮತ್ತು ಮಂಡಪ್ಪ ಉಪ್ಪಿನಕಾಯಿ ತಳಿ ಮಾವು, ಮೌಲ್ಯವರ್ಧಿತ ಉತ್ಪನ್ನಗಳನ್ನುಪ್ರದರ್ಶನಕ್ಕಿಡಲಾಗಿದೆ. ರೈತರೇ ತಯಾರಿಸಿದ ಉಪ್ಪಿನಕಾಯಿ, ಬೆಲ್ಲ, ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳ ಮಾರಾಟ ನಡೆಯುತ್ತಿದೆ.

ಮೇಳದಲ್ಲಿ 22 ಸ್ಟಾಲ್​ ಹಾಕಲಾಗಿದ್ದು, 55 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ. 10ಕ್ಕೂ ಹೆಚ್ಚು ತೋಟಗಾರಿಕೆ ರೈತ ಉತ್ಪಾದಕ ಕಂಪನಿಗಳು, ಜಿಲ್ಲಾ ಹಾಪ್​ಕಾಮ್ಸ್​ ಸಂಸ್ಥೆಗಳು ಸದಸ್ಯ ರೈತರಿಂದ ಮಾವಿನ ಹಣ್ಣುಗಳನ್ನು ಖರೀದಿಸಿ ಈ ಮೇಳದಲ್ಲಿ ಮಾರಾಟ ಮಾಡುತ್ತಿವೆ. ನೇರವಾಗಿ ಭಾಗವಹಿಸದ ರೈತರಿಗೂ ಯೋಗ್ಯ ಬೆಲೆ ಸಿಗುವಂತಾಗಿದೆ. ಕೆಜಿ ಹಣ್ಣಿಗೆ ಕನಿಷ್ಠ 70ರೂ.ನಿಂದ 140ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ.

ಸಾವಯವದಲ್ಲಿ ಬೆಳೆದ ಹಾಗೂ ದೃಢೀಕರಣದ ಪ್ರಮಾಣ ಪತ್ರ ಹೊಂದಿದ ರೈತರು ಭಾಗವಹಿಸಿದ್ದು, ವಿವಿಧ ತಳಿಗೆ ಯೋಗ್ಯ ಬೆಲೆಯನ್ನು ಇಲಾಖೆಯಿಂದ ನಿಗದಿಪಡಿಸಲಾಗಿದೆ. ಮಾವು ಬೆಳೆಯಲು ಆಸಕ್ತಿ ಹೊಂದಿದ ರೈತರಿಗೆ ಬೆಳೆವ ವಿಧಾನ, ಮಾರುಕಟ್ಟೆ, ಗುಣಮಟ್ಟ, ಇಳುವರಿ ತೆಗೆವ ಮಾಹಿತಿ ತಿಳಿಸಿಕೊಡಲಾಗುತ್ತಿದೆ. ಸಾವಯವ ಪದ್ದತಿಯಲ್ಲಿ ಬೆಳೆಯುವುದು, ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡುವ ಮಾಹಿತಿ ಒದಗಿಸಲಾಗುತ್ತಿದೆ.
ಕೊಪ್ಪಳ ಕೇಸರ್​ ಎಂದು ಬ್ರಾ$್ಯಂಡ್​ ಸೃಷ್ಟಿಸಿದ್ದು ಹೆಚ್ಚಿನ ಬೇಡಿಕೆ ಬಂದಿದೆ. ಮೇಳವನ್ನು ಪ್ಲಾಸ್ಟಿಕ್​ ಮುಕ್ತವಾಗಿಡುವ ಉದ್ದೇಶದಿಂದ ಸಾರ್ವಜನಿಕರಿಗೆ ಹಣ್ಣುಗಳನ್ನು ತೆಗೆದುಕೊಂಡು ಹೋಗಲು ಅನುಕೂಲವಾಗುವಂತೆ ತೋಟಗಾರಿಕೆ ಇಲಾಖೆಯಿಂದ ಪೇಪರ್​ ಬ್ಯಾಗ್​ಗಳನ್ನು ನೀಡಲಾಗುತ್ತಿದೆ. ಸೆಲ್ಫಿ ಪಾಯಿಂಟ್​ ನಿರ್ಮಿಸಿದ್ದು ಗ್ರಾಹಕರು ಹಣ್ಣ ಖರೀದಿ ಜತೆಗೆ ೋಟೋ ಕ್ಲಿಕ್ಕಿಸಿಕೊಂಡು ಖುಷಿಪಡುತ್ತಿದ್ದಾರೆ.

ಮಿಯಾ ಜಾಕಿ ಪ್ರದರ್ಶನ
ಪ್ರಪಂಚದ ಅತ್ಯಂತ ದುಬಾರಿ ಮಾವು ಎಂದು ಹೆಸರಾದ ಮಿಯಾ ಜಾಕಿ ಹಣ್ಣನ್ನು ಈ ಬಾರಿಯೂ ಮೇಳದಲ್ಲಿ ಪ್ರದರ್ಶನಕ್ಕಿಡಲಾಗಿದೆ. ಈ ತಳಿ ಹಣ್ಣು ಕೆಜಿಗೆ 2.5 ಲಕ್ಷ ರೂ. ಇದೆ. ಕಳೆದ ವರ್ಷವೂ ಪ್ರದರ್ಶನಕ್ಕಿಟ್ಟಿದ್ದು, ಸಾಕಷ್ಟು ಬೇಡಿಕೆ ಬಂದ ಹಿನ್ನೆಲೆಯಲ್ಲಿ ಈ ವರ್ಷವೂ ಎರಡು ಹಣ್ಣು ಪ್ರದರ್ಶನಕ್ಕಿಡಲಾಗಿದೆ. ಜತೆಗೆ ಆಸಕ್ತ ರೈತರಿಗೆ ಬೆಳೆವ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

ಹಣ್ಣು ತಿಂದು ಬೆಲ್ಲ ಖರೀದಿಸಿದ ಡಿಸಿ
ಮೇಳಕ್ಕೆ ಚಾಲನೆ ನೀಡಿದ ಡಿಸಿ ನಲಿನ್​ ಅತುಲ್​, ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ, ಎಸ್ಪಿ ಯಶೋದಾ ವಂಟಗೋಡಿ, ಎಡಿಸಿ ಸಾವಿತ್ರಿ ಕಡಿ ಮೇಳದಲ್ಲಿ ಒಂದು ಸುತ್ತು ಹಾಕಿದರು. ವಿವಿಧ ತಳಿ ಮಾವುಗಳನ್ನು ಕಂಡು ಖುಷಿ ಪಟ್ಟರು. ಮಾವು ಉಪ ಉತ್ಪನ್ನಗಳ ಮಾಹಿತಿ ಪಡೆದರು. ಕೆಲ ತಳಿ ಹಣ್ಣು ತಿಂದು ರುಚಿ ನೋಡಿದರು. ಬಳಿಕ ಡಿಸಿ ಸಾವಯವ ಬೆಲ್ಲ ಖರೀದಿಸಿದರು.

ರೈತರು, ಗಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಾವು ಮೇಳ ಆಯೋಜಿಸಲಾಗಿದೆ. ವಿವಿಧ ತಳಿ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ. ರೈತರಿಗೆ ಉತ್ತಮ ವೇದಿಕೆಯಾಗಿದ್ದು, ಗ್ರಾಹಕರಿಗೆ ಯೋಗ್ಯ ಬೆಲೆಯಲ್ಲಿ ನೈಸರ್ಗಿಕ ಹಣ್ಣು ಸಿಗಲಿದೆ. ದುಬಾರಿ ತಳಿ ಮಿಯಾ ಜಾಕಿ ಆಕರ್ಷಣೀಯವಾಗಿದೆ. ಮಾವು ಮಾರಾಟ, ರಫ್ತು ಮಾಡಲು ಸೂಕ್ತ ವ್ಯವಸ್ಥೆ ಇದೆ. ರೈತರು ಸದುಪಯೋಗ ಪಡೆಯಿರಿ. ನಲಿನ್​ ಅತುಲ್​. ಕೊಪ್ಪಳ ಡಿಸಿ.

ನಲಿನ್​ ಅತುಲ್​. ಕೊಪ್ಪಳ ಡಿಸಿ.

ರೈತರ ಬೇಡಿಕೆ ಅನುಸಾರ 8ನೇ ವರ್ಷ ಮೇಳ ಆಯೋಜಿಸಲಾಗಿದೆ. 100ಕ್ಕೂ ಹೆಚ್ಚು ತಳಿ ಪ್ರದರ್ಶನ, 12 ತಳಿ ಮಾರಾಟ ನಡೆಯುತ್ತಿದೆ. ರೈತರಿಗೆ ಮಾಹಿತಿ ಒದಗಿಸಲಾಗುತ್ತಿದೆ. ಗ್ರಾಹಕರಿಗೆ ಯೋಗ್ಯ ದರದಲ್ಲಿ ಮಾವು ದೊರೆಯುತ್ತಿದೆ. ಮೇ 21ವರೆಗೆ ಇರಲಿದ್ದು ಸಾರ್ವಜನಿಕರು ಸದುಪಯೋಗ ಪಡೆಯಲಿ. ಕೃಷ್ಣ ಉಕ್ಕುಂದ. ತೋಟಗಾರಿಕೆ ಉಪ ನಿರ್ದೇಶಕ ಕೊಪ್ಪಳ.

ಕೃಷ್ಣ ಉಕ್ಕುಂದ. ತೋಟಗಾರಿಕೆ ಉಪ ನಿರ್ದೇಶಕ ಕೊಪ್ಪಳ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net