

ಕೊಪ್ಪಳ: ಮಾವು ಕಟಾವಿಗೆ ಸಿದ್ಧವಾಗಿದ್ದು ವೈಜ್ಞಾನಿಕವಾಗಿ ಮಾಗಿಸಿ ಹಣ್ಣು ಮಾಡಿದಲ್ಲಿ ಉತ್ತಮ ಲಾಭ ಪಡೆಯಬಹುದೆಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಅಧಿಕಾರಿಗಳು ಬೆಳೆಗಾರರಿಗೆ ಸಲಹೆ ನೀಡಿದ್ದಾರೆ.
ಸಾಮಾನ್ಯವಾಗಿ ಕಾಯಿ ಕಚ್ಚಿದ ನಂತರ 15 ರಿಂದ 16 ವಾರಗಳಲ್ಲಿ ಕಟಾವಿಗೆ ಬರುತ್ತವೆ. 6 ರಿಂದ 8 ಕಾಯಿ ಉದುರಿ ಬೀಳುತ್ತವೆ. ಇವೆಲ್ಲವುಗಳನ್ನು ಗಮನಿಸಿ ಕೊಯ್ಲು ಮಾಡಬೇಕು. 1 ರಿಂದ 1.5 ಇಂಚಿನಷ್ಟು ದೇಟಿನೊಂದಿಗೆ ಕಟಾವು ಮಾಡಿ ನೆರಳಿನಲ್ಲಿ ಆರಿಸಬೇಕು. ಮಾಗಿಸುವ ಟೆಂಟುಗಳು ಕಡಿಮೆ ಬೆಲೆಯಲ್ಲಿ ಸಿಗಲಿವೆ. ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ದೊರೆಯಲಿವೆ.(ದೂ.ಸಂ: 080-28446815)
ಟೆಂಟ್ 200 ಮೈಕ್ರಾನ್ ಪ್ಲಾಸ್ಟಿಕ್ನಿಂದ ತಯಾರಿಸಿದ್ದು, 4 ನ ಮೀಟರ್ ಅಳತೆ ಇರಲಿದೆ. ಒಂದು ಟನ್ ಹಣ್ಣು ಮಾಗಿಸುವಷ್ಟು ಸ್ಥಳಾವಕಾಶ ಹೊಂದಿವೆ. 75 ಕೆಜಿ ಹಣ್ಣನ್ನು ಪ್ಲಾಸ್ಟಿಕ್ ಟ್ರೇಗಳಲ್ಲಿ ಹಾಕಿ 5 ಲೀಟರ್ ನೀರಿಗೆ 10 ಮಿ.ಲೀ. ಇಥ್ರೇಲ್ ಜತೆಗೆ 2 ಗ್ರಾಂ. ಸೋಡಿಯಂ ಹೈಡ್ರಾಕ್ಸ್ಐಡ್ ಹರಳುಗಳನ್ನು ಮಿಶ್ರಣಮಾಡಿ ಟೆಂಟ್ನಲ್ಲಿಟ್ಟು ಗಾಳಿ ಆಡದಂತೆ ಮುಚ್ಚಬೇಕು. ಅದರೊಂದಿಗೆ ಬ್ಯಾಟರಿ ಚಾಲಿತ ಫ್ಯಾನ್ ಇಟ್ಟರೆ ಸೂಕ್ತ. 24 ಗಂಟೆಗಳ ಬಳಿಕ ಟ್ರೇ ಹೊರ ತೆಗೆಯಬೇಕು. 4&5ದಿನಗಳಲ್ಲಿ ಹಣ್ಣುಗಳು ಪಕ್ವವಾಗಲಿವೆ.
ಟೆಂಟ್ ಬೆಲೆ 4 ಸಾವಿರ ರೂ. ಯಲಬುರ್ಗಾ ತಾಲೂಕಿನ ನೆಲೊಗಲ್ ಗ್ರಾಮದ ಶ್ರೀನಿವಾಸ ಜಾಲಿಹಾಳ ತೋಟದಲ್ಲಿ ಲಭ್ಯವಿದ್ದು, ಪ್ರಾತ್ಯಕ್ಷಿಕೆ ಪಡೆಯಬಹುದು. (ಮೊ.ಸಂ. 8310431243) ಎಂದು ಮಾಹಿತಿ ನೀಡಿದ್ದಾರೆ.