ಕೊಪ್ಪಳದಲ್ಲಿ ಮಹಾವೀರ ಜಯಂತಿ ಆಚರಣೆ

Mahaveer jayanti koppal celebration
ಕೊಪ್ಪಳದಲ್ಲಿ ಭಾನುವಾರ ಜಿಲ್ಲಾಡಳಿತದಿಂದ ಭಗವಾನ್​ ಶ್ರೀಮಹಾವೀರ ಜಯಂತಿ ಆಚರಿಸಲಾಯಿತು. ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಡಿಡಿಪಿಐ ಶ್ರೀಶೈಲ ಬಿರದಾರ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಸಮುದಾಯ ಮುಖಂಡರಾದ ರಾಜೇಂದ್ರ ಜೈನ್​, ದೀಪಚಂದ್​ ಜೈನ್​, ಪ್ರವಿಣ ಜೈನ್​ ಇದ್ದರು.
Published on

ಕೊಪ್ಪಳ: ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸತಿ ಇಲಾಖೆ ಸಹಯಯೋಗದಲ್ಲಿ ಭಾನುವಾರ ಭಗವಾನ್​ ಶ್ರೀ ಮಹಾವೀರ ಜಯಂತಿ ಆಚರಿಸಲಾಯಿತು.

ಲೋಕಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಸರಳ ಹಾಗೂ ಸಾಂಕೇತಿಕ ಜಯಂತಿ ಆಚರಿಸಲಾಯಿತು. ಉಪವಿಭಾಗಾಧಿಕಾರಿ ಕ್ಯಾ.ಮಹೇಶ ಮಾಲಗಿತ್ತಿ ಮಹಾವೀರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಗೌರವ ನಮನ ಸಲ್ಲಿಸಿದರು. ಡಿಡಿಪಿಐ ಶ್ರೀಶೈಲ ಬಿರದಾರ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಸಮುದಾಯ ಮುಖಂಡರಾದ ರಾಜೇಂದ್ರ ಜೈನ್​, ದೀಪಚಂದ್​ ಜೈನ್​, ಪ್ರವಿಣ ಜೈನ್​, ಗೌತಮ್​ ಜೈನ್​, ಮಹಾವೀರ ಜೈನ್​, ಭರತ್​ ಜೈನ್​, ಪಾರಸಮಲ್​ ಜೈನ್​, ಮನೋಜ್​ ಜೈನ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net