

ಕೊಪ್ಪಳ: ನಗರದ ಮಹಾವೀರ ಜೈನ ಭವನದಲ್ಲಿ ಜಿಲ್ಲಾಡಳಿತ ಹಾಗೂ ಜೈನ ಸಂದಿಂದ ಗುರುವಾರ ಮಹಾವೀರ ಜಯಂತಿ ಆಚರಿಸಲಾಯಿತು.
ನಗರದ ಸಾಹಿತ್ಯ ಭವನದಿಂದ ಜವಾಹರ ರಸ್ತೆ ಮೂಲಕ ಕೋಟೆ ಬಸೀದಿ ಗುಡಿ ದರ್ಶನ ಪಡೆದು ಮಹಾವೀರ ಭವನವರೆಗೆ ಸಾಗಿತು. ಜೈನ ಸಮುದಾಯದ ದೀತಾ ಸುಭಾಷಚಂದ ನೇತಾಣಿ ದೀೆ ಸ್ವೀಕರಿಸಲಿದ್ದು, ಅವರ ಭವ್ಯ ಮೆರವಣಿಗೆ ನಡೆಯಿತು. ಸಂಸದ ರಾಜಶೇಖರ ಹಿಟ್ನಾಳ ಮೆರವಣಿಗೆಗೆ ಚಾಲನೆ ನೀಡಿದರು. ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ತಹಸೀಲ್ದಾರ್ ವಿಠ್ಠಲ್ ಚೌಗಲಾ ಇತರರು ಸಾಥ್ ನೀಡಿದರು.
ಕೊಪ್ಪಳ ಜೈನ ಸಂದ ಅಧ್ಯಕ್ಷ ಮಹೇಂದ್ರ ಚೋಪ್ರಾ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದರು. ಮಹಿಳಾ ಸಂಘದ ಅಧ್ಯೆ ಸಂಗೀತಾ ಜೀರಾವಲಾ ಮಾತನಾಡಿ, ಮಹಾವೀರರ ಆದರ್ಶಗಳನ್ನು ನಾವೆಲ್ಲ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಧರ್ಮ ಉಳಿಸುವ ಕೆಲಸ ಮಾಡೋಣ. ಹಿರಿಯರನ್ನು ಅನುಸರಿಸೋಣ ಎಂದರು. ದೀಕ್ಷೆ ಸ್ವೀಕರಿಸಿದ ದೀಕ್ಷಿತಾ ನೇತಾಣಿ ಅಭಿಪ್ರಾಯ ಹಂಚಿಕೊಂಡರು. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜೈನ ಸಮುದಾಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಮುದಾಯ ಮುಕಂಡರು ಇದ್ದರು.