ಬಂದ್ ಹಿನ್ನೆಲೆ ಮಾಚಿದೇವರ ಜಯಂತಿ ಮುಂದೂಡಿಕೆ

Published on

ಕೊಪ್ಪಳ: ೆ.24ರಂದು ಹಮ್ಮಿಕೊಳ್ಳಲು ಯೋಜಿಸಿದ್ದ ಮಡಿವಾಳ ಮಾಚಿದೇವರ ಜಯಂತಿಯನ್ನು ಮಾ.5ಕ್ಕೆ ಮುಂದೂಡಿದ್ದಾಗಿ ಜಿಲ್ಲಾ ಮಡಿವಾಳರ ಸಂದ ಅಧ್ಯಕ್ಷ ಕೃಷ್ಣ ಮಡಿವಾಳರ ತಿಳಿಸಿದರು.

ಕಾರ್ಖಾನೆ ಸ್ಥಾಪನೆ ವಿರೋಧಿಸಿ ೆ.24ರಂದು ಕೊಪ್ಪಳ ಬಂದ್ಗೆ ಕರೆ ನೀಡಲಾಗಿದೆ. ಇದಕ್ಕೆ ನಮ್ಮ ಸಮುದಾಯದ ಸಂಪೂರ್ಣ ಬೆಂಬಲವಿದೆ. ಬದಲಾಗಿ ಮಾ.5ರಂದು ಕೊಪ್ಪಳದ ಸಾಹಿತ್ಯ ಭವನದಲ್ಲಿ ಮಾಚಿದೇವರ ಜಯಂತಿ ಆಚರಿಸುತ್ತೇವೆ. ಅಂದು ಎಂದಿನಂತೆ ಮೆರವಣಿಗೆ, ವೇದಿಕೆ ಕಾರ್ಯಕ್ರಮ, ಗಣ್ಯರಿಗೆ ಸನ್ಮಾನ ಇರಲಿದೆ. ಸಮುದಾಯ ಜನರು ಸಹಕರಿಸಬೇಕೆಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಕೊಪ್ಪಳ ತಾಲೂಕು ಅಧ್ಯಕ್ಷ ನಾಗರಾಜ ಮಡಿವಾಳರ, ಸಂಘಟನಾ ಕಾರ್ಯದರ್ಶಿ ಶರಣಪ್ಪ ಮಡಿವಾಳರ, ಜಿಲ್ಲಾ ಯುವಕ ಸಂಘದ ಅಧ್ಯಕ್ಷ ಹುಲುಗಪ್ಪ ಮಡಿವಾಳರ ಮತ್ತು ಸಂಘಟನಾ ಕಾರ್ಯದರ್ಶಿ ಅಜಯ ಮಡಿವಾಳರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net