ಶಿರಸ್ತೇದಾರ ಲೋಕಾಯುಕ್ತ ಬಲೆಗೆ

lokayukta police ride in tahasildar office shirastedhar traped suneel kumar
ಸುನೀಲಕುಮಾರ್​
Published on

ಕೊಪ್ಪಳ: ಸರ್ಕಾರಿ ಕೆಲಸ ಮಾಡಿಕೊಡಲು ಲಂಚ ಪಡೆಯುತ್ತಿದ್ದ ನಗರದ ತಹಸೀಲ್ದಾರ್​ ಕಚೇರಿ ಶಿರಸ್ತೇದಾರ ಸುನೀಲಕುಮಾರ್​ ಕುಲಕರ್ಣಿ ಗುರುವಾರ ಲೋಕಾಯುಕ್ತ ಪೊಲೀಸ್​ ಬಲೆಗೆ ಬಿದ್ದಿದ್ದಾನೆ.

ಕರಿಯಪ್ಪ ಕೊಳ್ಳಿ ಎಂಬುವರು ಯೋಜನಾ ನಿರಾಶ್ರಿತ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದರು. ಪ್ರಮಾಣ ಪತ್ರ ಪಡೆಯಲು ಸುನೀಲಕುಮಾರ್​ 50 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದ. ಬಳಿಕ ಚೌಕಾಸಿ ಮಾಡಿ 37 ಸಾವಿರ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಈ ಬಗ್ಗೆ ಕರಿಯಪ್ಪ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾನೆ. ಗುರುವಾರ ತಹಸೀಲ್ದಾರ್​ ಕಚೇರಿಯಲ್ಲಿ ಹಣ ಪಡೆಯುವಾಗಲೇ ದಾಳಿ ನಡೆಸಿದ ಪೊಲೀಸರು ಹಣದ ಸಮೇತ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರೆದಿದೆ.

ರಾಯಚೂರು ಲೋಕಾಯುಕ್ತ ಎಸ್ಪಿ, ಕೊಪ್ಪಳ ಪ್ರಭಾರ ಡಿಎಸ್​ಪಿ ಚಂದ್ರಪ್ಪ ಮಾರ್ಗದರ್ಶನದಲ್ಲಿ ದಾಳಿ ನಡೆದಿದೆ. ಪಿಐಗಳಾದ ಶೈಲಾ ಪ್ಯಾಟಿಶೆಟ್ರ, ರಾಜೇಶ ಬಟಗುರ್ಕಿ, ಸುನೀಲ್​ ಹಾಗೂ ವಿಜಯಕುಮಾರ ತಂಡ ದಾಳಿಯಲ್ಲಿ ಭಾಗಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net