ಏತ ನೀರಾವರಿ ಯೋಜನೆ ಶೀಘ್ರ ಪೂರ್ಣ

district koppal lifrt irrigation alavandi betageri bahaddura bandi mla raghavendra hitnala
Published on

ಕೊಪ್ಪಳ: ಅಳವಂಡಿ&ಬೆಟಗೇರಿ, ಬಹಾದ್ದೂರಬಂಡಿ ಏತ ನೀರಾವರಿ ಯೋಜನೆಗಳನ್ನು ಶ್ರೀ ಪೂರ್ಣಗೊಳಿಸಲಾಗುವುದೆಂದು ಶಾಸಕ ರಾವೇಂದ್ರ ಹಿಟ್ನಾಳ ತಿಳಿಸಿದರು.

ಬಹಾದ್ದೂರಬಂಡಿ ಏತ ನೀರಾವರಿ ಯೋಜನೆಯಡಿ 12,988 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ. 0.50 ಟಿಎಂಸಿ ಅಡಿ ನೀರು ಬೇಕಿದ್ದು ತುಂಗಭದ್ರಾ ಹಿನ್ನೀರಿನಿಂದ ಪಡೆಯಲಾಗುವುದು. 188.44 ಕೋಟಿ ರೂ. ಮೊತ್ತದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಮೊದಲನೇ ಹಂತಕ್ಕೆ 2018ರಲ್ಲಿ 80 ಕೋಟಿ ರೂ.ಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಜಾಕ್​ವೆಲ್​, ಇನ್​ಟೇಕ್​ ಕಾಲುವೆ, ರೈಸಿಂಗ್​ ಮೇನ್​, ಡೆಲಿವರಿ ಚೇಂಬರ್​ ಹಾಗೂ ಟ್ರಾನ್ಸ್​ಮಿಷನ್​ಲೈನ್​, 33 ಕೆವಿ ಸಬ್​ ಸ್ಟೇಷನ್​, 3+1 ಪಂಪ್​ ಮತ್ತು ಮೋಟಾರಗಳು, 2 ಡೆಲಿವರಿ ಚೇಂಬರ್​ಗಳು ನಿರ್ಮಿಸಲಾಗಿದೆ. ಪ್ರತಿ ಪಂಪ್​ನಿಂದ 50 ಕ್ಯೂಸೆಕ್​ನಂತೆ ಒಟ್ಟು 915 ಕ್ಯೂಸೆಕ್​ ನೀರು ಹರಿಸಲಾಗುವುದು. ಯೋಜನೆ ಪರಿಷ್ಕರಿಸಿದ್ದು 275 ಕೋಟಿ ರೂ.ಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬಹಾದ್ದೂರ್​ ಬಂಡಿ ಯೋಜನೆಯಡಿ 3 ಕಾಲುವೆಗಳು ನಿರ್ಮಿಸಬೇಕಾಗಿದೆ. 203 ಎಕರೆ ಭೂಮಿ ಭೂ ಸ್ವಾಧಿನ ಪಡಿಸಿಕೊಳ್ಳಲು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೊಲಗಾಲುವೆಗಳ ನಿಮಾರ್ಣಕ್ಕಾಗಿ 40 ಕೋಟಿ ಅವಶ್ಯವಿದೆ. ಅಳವಂಡಿ&ಬೇಟಗೇರಿ ಏತ ನೀರಾವರಿ ಯೋಜನೆಗೂ 0.5 ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ. ಮೈನಳ್ಳಿ, ಹಂದ್ರಾಳ, ಅಳವಂಡಿ, ನರಸಿಪೂರ, ಕವಲೂರು, ಹಿರೇಸಿಂದೋಗಿ, ಚಿಕ್ಕನಹಳ್ಳಿ, ಬೇಟಗೇರಿ ಹಾಗೂ ಕುಕನೂರು ತಾಲೂಕಿನ ಕೋಮಲಾಪುರ, ತಳಕಲ್​ ಒಟ್ಟು 10 ಗ್ರಾಮಗಳ 9 ಸಾವಿರ ಎಕರೆ ನೀರಾವರಿಯಾಗಲಿದೆ. 211 ಕೋಟಿ ರೂ.ಗೂ ಯೋಜನೆ ಪರಿಷ್ಕರಿಸಲಾಗಿದೆ. ಮಧ್ಯ ಪ್ರದೇಶ ಮಾದರಿ ಮುಖ್ಯ ಪೈಪ್​ಲೈನ್​ ಹಾಗೂ ವಿತರಣಾ ಪೈಪ್​ಲೈನ್​ ಅಳವಡಿಕೆಗೆ 11.50 ಕೋಟಿ ರೂ.ಗೆ ಟೆಂಡರ್​ ಕರೆಯಲಾಗಿದೆ ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net