ಕೊಪ್ಪಳ: ಅಡವಿಟ್ಟ ಆಭರಣ ಹಿಂದಿರುಗಿಸದ ಮಣಪು$್ಪರಂ ಗೋಲ್ಡ್ ೈನಾನ್ಸ್ಗೆ ಸಾಲದ ಹಣದ ಮೊತ್ತಕ್ಕೆ ಶೇ.6ರಷ್ಟು ಬಡ್ಡಿ ಜತೆಗೆ ಮಾನಸಿಕ ಹಿಂಸೆ ನೀಡಿದ್ದಕ್ಕೆ 45 ದಿನದೊಳಗೆ 5 ಸಾವಿರ ರೂ. ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯೆ ಜಿ.ಇ.ಸೌಭಾಗ್ಯಲಕ್ಷಿ$್ಮ ಆದೇಶಿಸಿದ್ದಾರೆ.
ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದ ಹಿರೇ ಬಸಪ್ಪ ತನ್ನ ವ್ಯವಸಾಯಕ್ಕಾಗಿ ಮಣಪು$್ಪರಂ ಗೋಲ್ಡ್ ೈನಾನ್ಸ್ನಲ್ಲಿ 2024ರ ಮೇ 1ರಿಂದ 3ವರೆಗೆ 62.7ಗ್ರಾಂ ಬಂಗಾರದ ಆಭರಣಗಳನ್ನು ಅಡವಿಟ್ಟು 2.84 ಲಕ್ಷ ರೂ. ಸಾಲ ಪಡೆದಿದ್ದರು. ಬಳಿಕ ಅಸಲು ಮತ್ತು ಬಡ್ಡಿ ಮರುಪಾವತಿ ಮಾಡಿ ಅಡವಿಟ್ಟ ಆಭರಣ ನೀಡಲು ತಿಳಿಸಿದ್ದಾರೆ. ಆದರೆ, ಕಂಪನಿ ನೀಡದೆ ದಿನದೂಡಿದೆ. ಇದರಿಂದ ಬೇಸತ್ತು ವಕೀಲರ ಮೂಲಕ ನೋಟಿಸ್ ಜಾರಿ ಮಾಡಿದ್ದಾರೆ. ಆದರೂ ಕಂಪನಿ ಆಭರಣ ವಾಸಪ್ ಮಾಡಿಲ್ಲ.
ಕೊನೆಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ದೂರು ದಾಖಲಿಸಿದ್ದಾರೆ. ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷ ಜಿ.ಇ.ಸೌಭಾಗ್ಯಲಕ್ಷಿ$್ಮ ಹಾಗೂ ಸದಸ್ಯ ರಾಜು ಎನ್.ಮೇತ್ರಿ ವಿಚಾರಣೆ ನಡೆಸಿದರು. ಕಂಪನಿ ಸೇವಾ ನೂನ್ಯತೆ ಎಸಗಿದ್ದು, 30 ದಿನದೊಳಗೆ ಆಭರಣ ವಾಪಸ್ ಮಾಡಲು ಸೂಚಿಸಿದ್ದಾರೆ. ಜತೆಗೆ 2.84 ಲಕ್ಷ ರೂ.ಗೆ ಶೇ.6ರಷ್ಟು ಬಡ್ಡಿಯನ್ನು ಮಾತ್ರ ಜತೆಗೆ ಮಾನಸಿಕ ಹಿಂಸೆ ನೀಡಿದ್ದಕ್ಕೆ ಹಾಗೂ ದೂರಿನ ಖರ್ಚು ತಲಾ 5 ಸಾವಿರ ರೂ.ನಂತೆ 10 ಸಾವಿರ ರೂ. ಪಾವತಿಗೆ ಆದೇಶಿಸಿದ್ದಾಗಿ ಸಹಾಯಕ ಆಡಳಿತಾಧಿಕಾರಿ ಪಿ.ಎಸ್ ಅಮರದೀಪ್ ತಿಳಿಸಿದ್ದಾರೆ.