ವಿಮೆ ಪಾವತಿಗೆ ಗ್ರಾಹಕರ ಆಯೋಗ ಸೂಚನೆ

Published on

ಕೊಪ್ಪಳ: ಸೇವಾ ನೂನ್ಯತೆ ಎಸಗಿದ ಎಚ್​ಡಿಎ್​ಸಿ ಸ್ಟಾ$ಂಡರ್ಡ್​ ಲ್​ೈ ಇನ್ಶೂರೆನ್ಸ್​ ಕಂಪನಿ ಪಾಲಸಿದಾರರಿಗೆ 20,16,589 ರೂ. ಪರಿಹಾರ ಮೊತ್ತವನ್ನು ಶೇ.6ರ ಬಡ್ಡಿ ಸಮೇತ ವಿತರಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯೆ ಜಿ.ಇ.ಸೌಭಾಗ್ಯಲಕ್ಷಿ$್ಮ ಆದೇಶಿಸಿದ್ದಾರೆ.

ಗಂಗಾವತಿ ತಾಲೂಕಿನ ಬಸಾಪಟ್ಟಣದ ಪಂಪಾಪತಿ ಹರಿಜನ ಎಂಬುವರು ಎಚ್​ಡಿಎ್​ಸಿ ಸ್ಟಾ$ಂಡರ್ಡ್​ ಲ್​ೈ ಇನ್ಶೂರೆನ್ಸ್​ ಕಂಪನಿ ಲಿ. ಮುಂಬೈನಲ್ಲಿ 2023ರ ಜೂನ್​ 14ರಂದು ವಿಮೆ ಮಾಡಿಸಿದ್ದರು. ಅರ್ಧ ವಾರ್ಷಿಕ ಪ್ರಿಮಿಯಂ 50 ಸಾವಿರ ರೂ. ಪಾವರಿಸಿದ್ದರು. 2023ರ ಸೆಪ್ಟಂಬರ್​ 11ರಂದು ಹೃದಯಾಘಾತದಿಂದ ಪಂಪಾಪತಿ ನಿಧನ ಹೊಂದಿದ್ದಾರೆ. ನಾಮಿನಿಯಾದ ಇವರ ಪತ್ನಿ ಸುನಿತಾ ವಿಮೆ ಪರಹಾರ ಮೊತ್ತ ಪಾವತಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಕಂಪನಿ ವಿಮೆದಾರ ಪಾಲಿಸಿ ಮಾಡಿಸುವಾಗ ಉದ್ಯೋಗ ಮತ್ತು ಆದಾಯದ ಬಗ್ಗೆ ತಪು$್ಪ ಮಾಹಿತಿ ನೀಡಿದ್ದಾಗಿ ತಿರಸ್ಕರಿಸಿದೆ. ಇದನ್ನು ಪ್ರಶ್ನಿಸಿ ಸುನಿತಾ ಗ್ರಾಹಕರ ಆಯೋಗ ಮೆಟ್ಟಿಲೇರಿದ್ದಾರೆ.

ಪ್ರಕರಣದ ವಿಚಾರಣೆ ನಡೆಸಿದ ಆಯೋಗ ಅಧ್ಯೆ ಜಿ.ಇ.ಸೌಭಾಗ್ಯ ಲಕ್ಷಿ$್ಮ, ಸದಸ್ಯ ರಾಜು ಎನ್​.ವಾದ&ಪ್ರತಿವಾದ ಆಲಿಸಿದರು. ವಿಮಾ ಕಂಪನಿಯಿಂದ ಸೇವಾ ನೂನ್ಯತೆ ಆದ ಬಗ್ಗೆ ತಿಳಿದು ಬಂದಿದ್ದು, ಪಾಲಸಿ ಪರಿಹಾರ ಮೊತ್ತ 20,16,589 ರೂ.ಗೆ ವಾರ್ಷಿಕ ಶೇ.6ರಷ್ಟು ಬಡ್ಡಿದರಲ್ಲಿ ದೂರಿನ ದಿನಾಂಕದಿಂದ ಪಾವತಿಸುವಂತೆ ಆದೇಶಿಸಿದೆ. ದೂರಿನ ಖರ್ಚು 5 ಸಾವಿರ ರೂ.ಗಳನ್ನು 45 ದಿನದೊಳಗೆ ಪಾವತಿಸಲು ತಿಳಿಸಿದ್ದಾಗಿ ಆಯೋಗದ ಸಹಾಯಕ ರಿಜಿಸ್ಟ್ರಾರ ಪಿ.ಎಸ್​.ಅಮರದೀಪ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net