

ಕೊಪ್ಪಳ: ಸರ್ಕಾರಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಕರ್ತವ್ಯದಲ್ಲಿ ರ್ನಿಲಕ್ಷ$್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆಂದು ವಿಧಾನಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಎನ್.ಎಚ್. ಕೋನರಡ್ಡಿ ಎಚ್ಚರಿಸಿದರು.
ನಗರದ ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ವಿಧಾನ ಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯಿಂದ ಗುರುವಾರ ಹಮ್ಮಿಕೊಂಡಿದ್ದದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಸರ್ಕಾರ ಜನರ ಕಲ್ಯಾಣಕ್ಕಾಗಿ ಯೋಜನೆ ರೂಪಿಸುತ್ತದೆ. ಅವುಗಳನ್ನು ಜಾರಿ ಮಾಡದಿದ್ದರೆ ಹೇಗೆ ? ಮಿಷಿನ್ ಇಂಧ್ರಧನುಷ್, ಮಾತೃತ ವಾತ್ಸಲ್ಯ, ಮಕ್ಕಳ ರಕ್ಷಣಾ ಟಕ, ಬಾಲ ನ್ಯಾಯ ಮಂಡಳಿ, ಮಕ್ಕಳ ಕಲ್ಯಾಣ ಸಮಿತಿ, ದೇವದಾಸಿ ಮಕ್ಕಳಿಗೆ ಸಹಾಯ ಇನ್ನಿತರ ಯೋಜನೆಗಿವೆ. ಅವುಗಳ ಪರಿಣಾಕಾರಿ ಜಾರಿ ಅಗತ್ಯ. ತಪು$್ಪಮಾಹಿತಿ ನೀಡಬೇಡಿ. ಕೊಪ್ಪಳದಲ್ಲೂ ಬಾಲ್ಯವಿವಾಹ, ಪೋಕ್ಸೋ ಪ್ರಕರಣಗಳು ಏರಿಕೆಯಾಗುತ್ತಿವೆ. ಅಧಿಕಾರಿಗಳೆಲ್ಲ ಏನು ಮಾಡುತ್ತಿದ್ದೀರಿ ? ಎಂದು ಪ್ರಶ್ನಿಸಿದರು.
ಹೆಣ್ಣು ಮಕ್ಕಳ ರಕ್ಷಣೆ ಹಾಗೂ ಶಿಕ್ಷಣ ಉತ್ತೇಜಿಸಬೇಕು. ಈ ಭಾಗಕ್ಕೆ ಕೆಕೆಆರ್ಡಿಬಿಯಿಂದ ಸಾಕಷ್ಟು ಅನುದಾನ ನೀಡಲಾಗುತ್ತಿದೆ. ಅದರ ಸದ್ಬಳಕೆ ಆಗಲಿ. ಸಿಎಸ್ಆರ್ ಅನುದಾನದಡಿ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ಶಿಕ್ಷಕರ ನೇಮಕಕ್ಕೆ ಅವಕಾಶವಿದೆ. ಅದನ್ನು ಬಳಸಿ ಎಸ್ಸೆಸ್ಸೆಲ್ಸಿ ಲಿತಾಂಶ ಸುಧಾರಿಸಿ. ಪ್ರೌಢಶಾಲೆ, ಪಿಯು ಹಂತದ ವಿದ್ಯಾರ್ಥಿಗಳಿಗೆ ಬಾಲ್ಯವಿವಾಹ ಜಾಗೃತಿ ಮೂಡಿಸಿ. ಪ್ರತಿ ತಿಂಗಳು ಮಾಸಿಕ ವರದಿ ಸಲ್ಲಿಸುವಂತೆ ಸೂಚಿಸಿದರು.
ಸಮಿತಿ ಸದಸ್ಯ ಎಚ್.ಎ.ಇಕ್ಬಾಲ್ ಹುಸೇನ್ ಮಾತನಾಡಿ, ಕೊಪ್ಪಳದಲ್ಲಿ ಅಪಹರಣ, ಅತ್ಯಾಚಾರ, ನಾಪತ್ತೆ, ಪೋಕ್ಸೋ ಪ್ರಕರಣ ಹೆಚ್ಚುತ್ತಿರುವುದು ಆತಂಕಕಾರಿ. ಇದರ ನಿಯಂತ್ರ ಅವಶ್ಯ. ಖಾಸಗಿ ದತ್ತು ಕೇಂದ್ರಗಳು ದುಡ್ಡು ಮಾಡುವ ಕೇಂದ್ರಗಳಾಗಿವೆ. ಈ ಬಗ್ಗೆ ನಿಗಾಇರಲಿ. ಹೆಚ್ಚೆಚ್ಚು ಜಾಗೃತಿ ಮೂಡಿಸಿದರೆ ಅಪರಾಧ ಪ್ರಮಾಣ ಕಡಿಮೆ ಆಗುತ್ತದೆ. ಅನ್ನಭಾಗ್ಯ ಯೋಜನೆ ಜನರಿಗೆ ಉಪಯೋಗವಾಗುತ್ತಿದೆ. ಅನಗತ್ಯವಾಗಿ ಪಡಿತರ ಚೀಟಿ ರದ್ದುಗೊಳಿಸಬೇಡಿ. ಸರಳ ವಿವಾಹ ಯೋಜನೆ ಅರಿವು ಮೂಡಿಸುವಂತೆ ಸಲಹೆ ನೀಡಿದರು.
ಇನ್ನೋರ್ವ ಸಮಿತಿ ಸದಸ್ಯ ಶರಣಗೌಡ ಕಂದಕೂರ ಮಾತನಾಡಿ, ಸರ್ಕಾರಿ ಯೋಜನೆಗಳ ಅರಿವು ಮೂಡಿಸಿ. ಅಪರಾಧ ಪ್ರಕರಣಗಳ ಸಂಖ್ಯೆ ಕಡಿಮೆ ಮಾಡುವಂತೆ ತಿಳಿಸಿದರು. ಸದಸ್ಯೆ ಕರೆಮ್ಮ ನಾಯಕ ಮಾತನಾಡಿ, ಮಹಿಳೆ ಮನೆಯಲ್ಲಿದ್ದುಕೊಂಡು ದೂರು ನೀಡಿದರೂ ನ್ಯಾಯ ಕೊಡಿಸುವ ಕೆಲಸವಾಗಬೇಕು ಎಂದರು.
ಪೊಲೀಸ್ ಮಹಾ ನಿರೀಕ್ಷಕ ಸತೀಶ ಕುಮಾರ್, ಬಳ್ಳಾರಿ ಐಜಿಪಿ ವರ್ತಿಕ ಕಟಿಯಾರ, ಜಿಪಂ ಸಿಇಒ ವರ್ಣಿತ್ ನೇಗಿ, ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ, ಶಾಲಾ ಶಿಕ್ಷಣ ಅಪರ ಆಯುಕ್ತ ಪಾಂಡ್ವೆ ರಾಹುಲ್ ತುಕಾರಾಮ್, ಎಡಿಸಿ ಸಿದ್ರಾಮೇಶ್ವರ ಇತರ ಇಲಾಖೆ ಅಧಿಕಾರಿಗಳಿದ್ದರು.
ಕಾವಲು ಸಮಿತಿ ರಚನೆಗೆ ಅವಶ್ಯ
ಗ್ರಾಮೀಣ ಪ್ರದೇಶದಂತೆ ನಗರ, ಸ್ಥಳಿಯ ಸಂಸ್ಥೆಗಳಲ್ಲಿ ಮಕ್ಕಳ ಕಾವಲು ಸಮಿತಿ ರಚನೆ ಆಗಬೇಕಿದೆ. ಈ ಬಗ್ಗೆ ಅನುಮೋದನೆ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು. ರಾಜ್ಯದ ಎಲ್ಲ ನಗರ, ಸ್ಥಳಿಯ ಸಂಸ್ಥೆಗಳಲ್ಲಿ ಕಾವಲು ಸಮಿತಿಗಳಾದಲ್ಲಿ ಮಕ್ಕಳ ರಕ್ಷಣೆಗೆ ಅನುಕೂಲವಾಗಲಿದೆ. ಈ ಬಗ್ಗೆ ಸಮಿತಿ ಸರ್ಕಾರಕ್ಕೆ ಆಗ್ರಹಿಸಲಾಗುವುದು. ಸಂಬಂಧಿಸಿದ ಇಲಾಖೆ ರಾಜ್ಯಮಟ್ಟದ ಅಧಿಕಾರಿಗಳಿಗೂ ಸೂಚಿಸಲಾಗುವುದು. ಒಟ್ಟಿನಲ್ಲಿ ಮಕ್ಕಳ ಸಂಬಂಧಿ ಅಪರಾಧಗಳಿಗೆ ಕಡಿವಾಣ ಹಾಕಬೇಕು ಎಂದು ಎನ್.ಎಚ್.ಕೋನರಡ್ಡಿ ಹೇಳಿದರು. ಸಮಿತಿ ಸದಸ್ಯರನ್ನು ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು.