ಸಾಮಾನ್ಯರಿಗೆ ಕಾನೂನು ಅರಿವು ಅವಶ್ಯ

district koppal legal cell workshop
Published on

ಕೊಪ್ಪಳ: ಜನ ಸಾಮಾನ್ಯರು ಕಾನೂನು ಅರಿಯುವುದು ಅಗತ್ಯ ಎಂದು ಜಿಲ್ಲಾ ನ್ಯಾಯಾಧೀಶ ಚಂದ್ರಶೇಖರ ಸಿ. ಹೇಳಿದರು.

ನಗರದ ಕ್ರಿಸ್ತಕ್ಯೋತಿ ಚರ್ಚ್​ನಲ್ಲಿ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದಿಂದ ವಿಧಾನ ಸೆ ಸಮಾಧಾನ ಅಂಗವಾಗಿ ಹಮ್ಮಿಕೊಂಡಿದ್ದ ಮಹಿಳಾ ಕಾನೂನು ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

"ವಿಧಾನ ಸೆ ಸಮಾಧಾನ' ಎಂದರೆ ಕಾನೂನು ಮೂಲಕ ಪರಿಹಾರ ಪಡೆಯುವುದಾಗಿದೆ. ಎಲ್ಲರಿಗೂ ಕಾನೂನು ಅರಿವು ಮೂಡಿಸಲು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ವೈವಾಹಿಕ ಸಂಬಂಧಗಳಲ್ಲಿ ಬರುವ ತೊಂದರೆ, ಆಸ್ತಿಗೆ ಸಂಬಂಧಿ ಪ್ರಕರಣ, ಜೀವನಾಂಶ ಪ್ರಕರಣಗಳಲ್ಲಿ ಬರುವ ಅಪ್ರಾಪ್ತ ಮಕ್ಕಳನ್ನು ನೋಡಿಕೊಳ್ಳದೆ ಇರುವುದು, ಹೆಂಡತಿ ಮತ್ತು ತಂದೆ ತಾಯಿನ್ನು ನೋಡಿಕೊಳ್ಳದಿದ್ದಾಗ ಯಾವ ರೀತಿ ಕಾನೂನು ನೆರವು ಪಡೆಯಬೇಕೆಂದು ಎಲ್ಲರೂ ತಿಳಿದುಕೊಂಡಿರಬೇಕು. ಕಾನೂನು ಮೂಲಕ ಜನರ ಕಷ್ಟ, ಸಮಸ್ಯೆಗಳನ್ನು ಪರಿಹರಿಸುವುದು ಪ್ರಾಧಿಕಾರದ ಮುಖ್ಯ ಉದ್ದೇಶ ಎಂದರು.

ಕೊಪ್ಪಳ ತಾಲೂಕು ಪಾಸ್ಟರ್ಸ್​ ಅಸೋಸಿಯೇಷನ್​ ಅಧ್ಯಕ್ಷ ರೆವರೆಂಡ ಜೆ.ರವಿಕುಮಾರ ಅಧ್ಯಕ್ಷತೆವಹಿಸಿದ್ದರು. ಹಿರಿಯ ವಕೀಲ ಶ್ಯಾಮಸುಂದರ ಹುಣಸಿಮರದ ವಿಶೇಷ ಉಪನ್ಯಾಸ ನೀಡಿದರು. ನ್ಯಾಯಾಧೀಶರಾದ ಸರಸ್ವತಿ ದೇವಿ, ಮಹಾಂತೇಶ ದರಗದ, ಭಾಗ್ಯಲಕ್ಷಿ$್ಮ, ಕಲ್ವಾರಿ ಚಾಪೆಲ್​ ಟ್ರಸ್ಟ್​ ಮುಖ್ಯಸ್ಥ ರೆವೆರೆಂಡ ನವನೀತ ಕುಮಾರ, ಕ್ರಿಸ್ತ ಜ್ಯೋತಿ ಇಸಿಐ ಚರ್ಚ್​ ಕಾರ್ಯದರ್ಶಿ ಶಾಂತರಾಜ್​ ಎಂ.ಮುತೋರ್ಟಿ, ಸಿಬ್ಬಂದಿ, ವಿದ್ಯಾರ್ಥಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net