ಲಾರಿಗಳ ಮಧ್ಯೆ ಡಿಕ್ಕಿ, ಚಾಲಕನ ರಕ್ಷಣೆ

larry accident near bannikoppa at NH 60 driver rescued by fire department officers koppal
larry accident near bannikoppa at NH 60 driver rescued by fire department officers koppal
Published on

ಕೊಪ್ಪಳ: ಕುಕನೂರು ತಾಲೂಕಿನ ತಳಕಲ್​-ಬನ್ನಿಕೊಪ್ಪ ಗ್ರಾಮಗಳ ನಡುವೆ ಎನ್​ಎಚ್​ 60ರಲ್ಲಿ ಸೋಮವಾರ ಎರಡು ಲಾರಿಗಳ ನಡುವೆ ಅಪಘಾತ ನಡೆದಿದ್ದು, ಅಗ್ನಿಶಾಮಕ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ರಸ್ತೆ ಪಕ್ಕದಲ್ಲಿ ನಿಂತಿದ್ದ ಲಾರಿಗೆ ವೇಗವಾಗಿ ಬಂದ ತಮಿಳುನಾಡು ಮೂಲದ ಮತ್ತೊಂದು ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಲಾರಿ ಮುಂಭಾಗ ನುಜ್ಜು ಗುಜ್ಜಾಗಿದೆ.

ಕ್ಯಾಬಿನ್​ನಲ್ಲಿ ಸಿಲುಕಿದ್ದ ಚಾಲಕ ಹೊರ ಬಾರದೆ ಪ್ರಾಣಪಾಯಕ್ಕೆ ಸಿಲುಕಿದ್ದ. ತಕ್ಷಣ ಸಹಾಯಕ್ಕೆ ಧಾವಿಸಿದ ಅಗ್ನಿಶಾಮಕ ಅಧಿಕಾರಿಗಳಾದ ಶಿವಕುಮಾರ್​ ಬಾಗೇವಾಡಿ, ವಿನಾಯಕ, ತೇಜಸ್ವಿಕುಮಾರ, ಫಕೀರಪ್ಪ, ಅಮರೇಶ್​, ಚೇತನ್​ ಚಾಲಕನಿಗೆ ಧೈರ್ಯ ತುಂಬಿ, ನೀರು ಕುಡಿಸಿ ಸಮಾಧಾನಿಸಿದರು.

ಬಳಿಕ ತಮ್ಮ ಟೂಲ್​ ಕಿಟ್​ ಬಳಸಿ ಒಂದೂವರೆ ಗಂಟೆ ಕಾರ್ಯಾರಣೆ ನಡೆಸಿ ಚಾಲಕ ಗಣೇಶ ಎಂಬಾತನ ಪ್ರಾಣ ರಸಿದ್ದಾರೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಕಾಲುಗಳು ಮುರಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net