ಭೂ ದಾಖಲೆ ಗಣಕೀಕರಣ ಸಮರ್ಪಕವಾಗಲಿ - ಸಚಿವ ಶಿವರಾಜ ತಂಗಡಗಿ ಸೂಚನೆ

District Koppal Land record Computerize Minister tangadagi
Published on

ಕೊಪ್ಪಳ: ಜಿಲ್ಲೆಯಲ್ಲಿ ಭೂ ದಾಖಲೆಗಳ ಗಣಕೀಕರಣ ಕಾರ್ಯ ಸಮರ್ಪಕವಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಜಿಲ್ಲೆಯ ಎಲ್ಲಾ ತಾಲೂಕಿನ ಭೂ ದಾಖಲೆಗಳ ಗಣಕೀಕರಣ ಕಾರ್ಯಕ್ಕೆ ಬೆಂಗಳೂರಿನ ತಮ್ಮ ಕಚೇರಿಯಿಂದ ಬುಧವಾರ ಗೂಗಲ್​ ಮೀಟ್​ಗೆ ಚಾಲನೆ ನೀಡಿ ಮಾತನಾಡಿದರು. ಎಲ್ಲ ತಾಲೂಕಿನಲ್ಲಿ ಭೂ ದಾಖಲೆಗಳ ಗಣಕೀಕರಣ ಸರಿಯಾಗಿ ನಡೆಯಬೇಕು. ನೀರಾವರಿ ಭಾಗದಲ್ಲಿ ಇವುಗಳ ಸಮಸ್ಯೆಗಳು ಹೆಚ್ಚಿದೆ. ಸರ್ವೆ ಮತ್ತು ನೋಂದಣಿ ಇಲಾಖೆಯ ದಾಖಲೆಗಳ ಡಿಜಿಟಲೀಕರಣದಿಂದ ಹಳೆಯ ದಾಖಲಾತಿಗಳ ಸಂರಕ್ಷಣೆ ಮಾಡಲು ಅನುಕೂಲವಾಗುತ್ತದೆ. ತ್ವರಿತ ಆಡಳಿತ ಸೇವೆಯನ್ನು ಜನರಿಗೆ ಒದಗಿಸುವುದೇ ಇದರ ಉದ್ದೇಶವಾಗಿದೆ ಎಂದರು.

ಕೊಪ್ಪಳ ತಹಸಿಲ್​ ಕಚೇರಿಯಿಂದ ಭೂ ದಾಖಲೆಗಳ ಗಣಕೀಕರಣಕ್ಕೆ ಚಾಲನೆ ನೀಡಿದ ಡಿಸಿ ನಲಿನ್​ ಅತುಲ್​, ಎಲ್ಲ ತಾಲೂಕಿನಲ್ಲಿ ಭೂ ದಾಖಲೆಗಳ ಗಣಕೀಕರಣ ನಡೆಯುತ್ತಿದ್ದು, 3 ಲಕ್ಷಕ್ಕಿಂತ ಹೆಚ್ಚಿನ ಫೈಲ್​ಗಳು ಆಗುತ್ತಿವೆ. ಯಾವುದೇ ಸಮಸ್ಯೆಗಳಾಗದಂತೆ ಪ್ರತಿ ತಾಲೂಕಿನಲ್ಲಿ ಆರು ಜನ ಆಪರೇರ್ಟಸ್​, ಮೂರು ಸ್ಕಾನರ್​, ಯುಪಿಎಸ್​ ಸೇರಿದಂತೆ ಅಗತ್ಯ ಉಪಕರಣಗಳನ್ನು ನೀಡಲಾಗಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು.

ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ. ತಹಸೀಲ್ದಾರ್​ ವಿಠ್ಠಲ್​ ಚೌಗಲಾ. ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ, ಎಲ್ಲ ತಾಲೂಕಿನ ತಹಸೀಲ್ದಾರರು, ಉಪ ತಹಸೀಲ್ದಾರರು. ಭೂ ದಾಖಲೆಗಳ ಗಣಕೀಕರಣ ಸಿಬ್ಬಂದಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net