ಮಾಹಿತಿ ಬಹಿರಂಗಕ್ಕೆ ಆಗ್ರಹ

labour union memorandum submission to labour officer in koppal
ವಿವಿಧ ಮಾಹಿತಿ ಒದಗಿಸುವಂತೆ ಒತ್ತಾಯಿಸಿ ಕಟ್ಟಡ ಕಾರ್ಮಿಕರ ಸಂದ ಪದಾಧಿಕಾರಿಗಳು ಮಂಗಳವಾರ ಕೊಪ್ಪಳದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಸುಧಾ ಗರಗಗೆ ಮನವಿ ಸಲ್ಲಿಸಿದರು. ಸಂಟನೆಗಳ ಪದಾಧಿಕಾರಿಗಳಾದ ಕಾಸಿಂ ಸರ್ದಾರ, ಎಸ್​.ಎ.ಗಾರ್​, ತುಕಾರಾಮ್​ ಪಾತ್ರೋಟಿ, ನೂರ್​ಸಾಬ್​ ಹೊಸಮನಿ, ರಾಜಪ್ಪ ಚೌವ್ಹಾಣ್​ ಇದ್ದರು.
Published on

ಕೊಪ್ಪಳ: ಕಟ್ಟಡ ಕಾರ್ಮಿಕರಿಗೆ ಮಂಜೂರಾದ ವಿವಿಧ ಸೌಲಭ್ಯಗಳ ಪಟ್ಟಿ ಹಾಗೂ ಲ್ಯಾಪ್​ ಟಾಪ್​ ವಿತರಿಸಿದ ಮಾಹಿತಿ ಬಹಿರಂಗಕ್ಕೆ ಒತ್ತಾಯಿಸಿ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ, ರಾಜ್ಯ ಕಟ್ಟಡ ಮತ್ತು ಇತರೆ ನಿಮಾರ್ಣ ಕಾರ್ಮಿಕರ ಫೆಡರೇಶನ್​ ಪದಾಧಿಕಾರಿಗಳು ಮಂಗಳವಾರ ಜಿಲ್ಲಾ ಕಾರ್ಮಿಕ ಅಧಿಕಾರಿ ಸುಧಾ ಗರಗಗೆ ಮನವಿ ಸಲ್ಲಿಸಿದರು.

ವಿವಿಧ ಯೋಜನೆಗಳು ಹಾಗೂ ಲ್ಯಾಪ್​ಟಾಪ್​ ವಿತರಣೆಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿರುವ ಶಂಕೆ ಇದೆ. ಹೀಗಾಗಿ ಈ ಬಗ್ಗೆ ಸಂಟನೆಗಳಿಗೆ ಪೂರ್ಣ ಮಾಹಿತಿ ಒದಗಿಸಬೇಕು. 2023 ಸೆಪ್ಟಂಬರ್​ನಿಂದ ಪ್ರಸ್ತುತವರೆರಿನ ವಿವರ ಬೇಕು. ಕಾರ್ಮಿಕರಿಗೆ ಮಂಜೂರಾದ ವಿವಿಧ ಸೌಲಭ್ಯಗಳು ಹಾಗೂ ಲ್ಯಾಪ್​ಟಾಪ್​ ವಿತರಣೆ ಪಟ್ಟಿ ನೀಡಬೇಕು ಎಂದು ಒತ್ತಾಯಿಸಿದರು.

ಸಂಟನೆಗಳ ಪದಾಧಿಕಾರಿಗಳಾದ ಕಾಸಿಂ ಸರ್ದಾರ, ಎಸ್​.ಎ.ಗಾರ್​, ತುಕಾರಾಮ್​ ಪಾತ್ರೋಟಿ, ನೂರ್​ಸಾಬ್​ ಹೊಸಮನಿ, ರಾಜಪ್ಪ ಚೌವ್ಹಾಣ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net