ಕೊಪ್ಪಳ: ತಾಲೂಕಿನ ಅಲ್ಲಾನಗರ ಬಳಿ ಹೊಸಪೇಟೆ ಇಸ್ಪಾತ್ ಕೂಲರ್ ಜಾಗದಲ್ಲಿ ವಿಷಾನಿಲ ಸೋರಿಕೆಯಾಗಿ ಕಾರ್ಮಿಕ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿ ಮಾಲೀಕ ಸೇರಿ ಐವರ ವಿರುದ್ಧ ಮುನಿರಾಬಾದ್ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.
ಮೃತ ಕಾರ್ಮಿಕ ಮಾರುತಿ ಕೊರಗಲ್ ಸಹೋದರ ವಿರೇಶ ನೀಡಿದ ದೂರಿನ ಅನ್ವಯ ಕಂಪನಿಯ ಸೈಟ್ ವ್ಯವಸ್ಥಾಪಕ, ವ್ಯವಸ್ಥಾಪಕ ನಿರ್ದೇಶಕ, ಆಪರೇಷನ್ ಮತ್ತು ನಿರ್ವಹಣಾ ಮಾಲೀಕ, ಕಾರ್ಖಾನೆ ಮಾಲೀಕರು ಹಾಗೂ ಹೊಸಪೇಟೆ ಇಸ್ಪಾತ್ ಕಂಪನಿಯ ಮಾಲೀಕರ ವಿರುದ್ಧ ದೂರು ದಾಖಲಾಗಿದ್ದು, ಅವರ ಹೆಸರುಗಳನ್ನು ಉಲ್ಲೇಖಿಸಿಲ್ಲ.
ಟನೆಯಲ್ಲಿ ಕೊಪ್ಪಳ ತಾಲೂಕಿನ ಅಲ್ಲಾನಗರದ ಮಾರುತಿ ಕೊರಗಲ್ (24) ಮೃತಪಟ್ಟಿದ್ದು, ಕೊಪ್ಪಳ ತಾಲೂಕಿನ ಚಿಕ್ಕಬಗನಾಳ ಗ್ರಾಮದ ಯಮನೂರ ಬೆಣಕಲ್, ವಿರೂಪಾಕ್ಷಿ ಮೋರನಾಳ, ಹಾಲಪ್ಪ ಈಳಿಗೇರ, ಕನರಾಯ ಬಗನಾಳ, ಜಾರ್ಖಂಡ್ನ ರೋಯಾ ಬಗುಂಗಾ, ಆಂಧ್ರದ ಶಿವಕುಮಾರ ಕುಲಶ, ಮಹಾರಾಷ್ಟ್ರದ ಕಮಲೇಶಸಿಂಗ್, ಗಿಣಿಗೇರಿಯ ಸುರೇಶ ಚೌವ್ಹಾಣ್, ಹಗರಿಬೊಮ್ಮನಹಳ್ಳಿಯ ನಾಗರಾಜ, ಗಂಗಾವತಿ ತಾಲೂಕಿನ ದಾಸನಾಳದ ಮಹಾಂತೇಶ ಅಸ್ವಸ್ಥಗೊಂಡಿದ್ದಾರೆ.
ಸುರಕ್ಷತೆ ಇಲ್ಲದ ಜಾಗದಲ್ಲಿ ಯಾವುದೇ ಸುರಾ ಪರಿಕರ ನೀಡದೆ ಕಾರ್ಮಿಕರನ್ನು ಕೆಸಲಕ್ಕೆ ಕಳಿಸಿದ್ದಾರೆ. ಇದರಿಂದ ನನ್ನ ಸಹೋದರ ಮಾರುತಿ ಮೃತಪಟ್ಟಿದ್ದು, ಉಳಿದವರು ಅಸ್ವಸ್ಥರಾಗಿದ್ದಾರೆ. ಟನೆ ಕಾರಣರಾದ ಐವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾನೆ.