ಯೋಜನೆಗಳ ಅಕ್ರಮ ತನಿಖೆಯಾಗಲಿ

district koppal labour construction protest kit
Published on

ಕೊಪ್ಪಳ: ನಾಮಕಾವಸ್ತೆ ಆರೋಗ್ಯ ತಪಾಸಣೆ ಸೇರಿ ಇತರ ಯೋಜನೆಗಳಿ 800 ಕೋಟಿ ರೂ. ವ್ಯಯಿಸಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಯೋಜನೆ ರದ್ದುಪಡಿಸಲು ಆಗ್ರಹಿಸಿ ಕಕ ಜಿಲ್ಲೆಗಳ ನೋಂದಾಯಿತ ಕಾಮಿಕ ಸಂಗಳ ಒಕ್ಕೂಟ ನೇತೃತ್ವದಲ್ಲಿ ಕಾರ್ಮಿಕರು ಡಿಸಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಮಂಡಳಿ 2024-25ರಲ್ಲಿ 31 ಖಾಸಗಿ ಆಸ್ಪತ್ರೆಗಳಿಗೆ ನೋಂದಾಯಿತ ಕಾರ್ಮಿಕರಿಗೆ 20 ತರಹದ ಆರೋಗ್ಯ ತಪಾಸಣೆ ಮಾಡಲು ಟೆಂಡರ್​ ನೀಡಿದೆ. ಇದೊಂದು ಬೋಗಸ್​ ಕಾರ್ಯಕ್ರಮ. ಖಾಸಗಿ ಆಸ್ಪತ್ರೆಗಳು ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂ. ಕೊಳ್ಳೆ ಹೊಡೆದಿವೆ. ಇದರಿಂದ ಕಾರ್ಮಿಕರಿಗೆ ಲಾಭವಾಗಿಲ್ಲ. ಕೌಶಲ ತರಬೇತಿ, ಉಪಕರಣಗಳ ಸುರತ ಬಳಕೆ ತರಬೇತಿ ಹೆಸರಿನಲ್ಲಿ ಹಣ ಪೋಲು ಮಾಡುತ್ತಿದ್ದಾರೆ. ಚಿತ್ರದುರ್ಗದಲ್ಲಿ ತರಬೇತಿ ನೀಡದೆ ಹಣ ಲೂಟಿ ಹೊಡೆದಿದ್ದಾರೆ. ಆರ್​ಪಿಎಲ್​ ಕಿಟ್​ ಖರೀದಿಯಲ್ಲೂ ಅಕ್ರಮ ನಡೆದಿದೆ. ಐಟಿ ವಿಭಾಗದಲ್ಲಿನ ತಾಂತ್ರಿಕ ದೋಷ, ಆಧಾರ್​ ಜೋಡಣೆ ಇನ್ನಿತರ ಹೆಸರಿನಲ್ಲಿ ಮಂಡಳಿ ಹಣ ಅನಗ್ತಯವಾಗಿ ಖರ್ಚು ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಎಲ್ಲ ಯೋಜನೆಗಳ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. 800 ಕೋಟಿ ರೂ. ಸೆಸ್​ ಹಣ ಪೋಲಾಗಿದ್ದು ಕಾರ್ಮಿಕರಿಗೆ ಯಾವುದೇ ಪ್ರಯೋಜನವಾಗಿಲ್ಲ. ಅಕ್ರಮ ಎಸಗಿದವರ ವಿರುದ್ಧ ಕ್ರಮವಾಗಬೇಕು. ಕಾರ್ಮಿಕರಿಗೆ ಪ್ರಯೋಜನವಿಲ್ಲದ ಯೋಜನೆಗಳನ್ನು ರದ್ದುಪಡಿಸಬೇಕು. ಕುಟುಂಬ ಐಡಿ ಅಪ್ಲಿಕೇಷನ್​ ರದ್ದಾಗಲಿ. ನೈಜ ಕಾರ್ಮಿಕರ ಅರ್ಜಿ ತಿರಸ್ಕಾರ ನಿಲ್ಲಿಸಿ. ವಿವಿಧ ಯೋಜನೆಗಳಡಿ ನೀಡುವ ಸಹಾಯಧನ ಮೊತ್ತ ಹೆಚ್ಚಿಸಿ. ನಗದು ರಹಿತ ಚಿಕಿತ್ಸೆಗೆ ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿದರು.

ಒಕ್ಕೂಟ ಅಧ್ಯಕ್ಷ ರಮೇಶ ಘೋರ್ಪಡೆ, ಉಪಾಧ್ಯಕ್ಷ ಶರಣಪ್ಪ ರೊಟ್ಟಿ, ಕಾರ್ಯದರ್ಶಿ ಮೆಹಬೂಬ್​ ಮಣ್ಣೂರ, ಖಜಾಂಚಿ ಮಹೇಶ ಗೋಡೆಕಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net