

ಕೊಪ್ಪಳ: ಹೊಸ ನಾಲ್ಕು ಕಾರ್ಮಿಕ ಕಾನೂನುಗಳು ಕಾರ್ಮಿಕರಿಗೆ ಮರಣ ಶಾಸನ ಎಂದು ಆರೋಪಿಸಿ ವಿವಿಧ ಸಂಟನೆಗಳ ಪ್ರಮುಖರು ಬುಧವಾರ ನಗರದಲ್ಲಿ ಪ್ರತಿಭಟನಾ ಜಾಥಾ ನಡೆಸಿದರು.
ಕಾರ್ಮಿಕ ಸಂಟನೆಗಳು ರಾಷ್ಟ್ರವ್ಯಾಪಿ ಕರೆ ನೀಡಿದ್ದ ಮುಷ್ಕರಕ್ಕೆ ಜಿಲ್ಲೆಯ ಕಾರ್ಮಿಕ ಸಂಟನೆಗಳು ಬೆಂಬಲ ವ್ಯಕ್ತಪಡಿಸಿದವು. ಬೆಳಗ್ಗೆಯೇ ಸಾರ್ವಜನಿಕ ಮೈದಾನ, ಈಶ್ವರ ಪಾರ್ಕ್ ಕಡೆ ಜಮಾಯಿಸಿದ ಪ್ರತಿಭಟನಕಾರರು ಬೃಹತ್ ಜಾಥಾ ನಡೆಸಿದರು. ದುಡಿವ ಜನರ ಸ್ವಾಯತ್ತತೆ ಕಸಿಯಬೇಡಿ. ಕರಾಳ ಕಾರ್ಮಿಕ ಸಂಹಿತೆಗಳ ಜಾರಿ ಮಾಡಕೂಡದು. 12 ತಾಸು ಕೆಲಸಕ್ಕೆ ಅವಕಾಶ ನೀಡಬಾರದು. ಕಾರ್ಮಿಕರಿಗೆ ಭದ್ರತೆ ಒದಗಿಸಬೇಕು. ದುಡಿವ ಕೈಗಳಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕು. ಕಾರ್ಮಿಕ ವಿರೋಧಿ ನಡೆ ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಶೋಕ ವೃತ್ತವರೆಗೆ ಪ್ರತಿಭಟನಾ ಜಾಥಾ ನಡೆಯಿತು. ಕೇಂದ್ರದ ಕಾರ್ಮಿಕ ವಿರೋಧಿ ನೀತಿ ವಿರುದ್ಧ ಘೋಷಣೆ ಕೂಗಿದರು. ಅಶೋಕ ವೃತ್ತ ಬಳಿ ಮಾನವ ಸರಪಳಿ ರಚಿಸಲು ಮುಂದಾದರು. ಸಂಚಾರ ತಡೆ ನಡಸಲು ಅವಕಾಶವಿಲ್ಲವೆಂದು ಪೊಲೀಸರು ಅಡ್ಡಿಪಡಿಸಿದರು. ಆದರೂ ಪ್ರತಿಭಟನಕಾರರು ಸರಪಳಿ ರಚಿಸಿ ಪ್ರತಿಭಟನೆ ದಾಖಲಿಸಿದರು. ಪ್ರತಿರೋಧ ಹೆಚ್ಚುತ್ತಲೇ ಪೊಲೀಸರು ಹೋರಾಟಗಾರರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದರು.
ಹೋರಾಟಗಾರರಾದ ಅಲ್ಲಮಪ್ರಭು ಬೆಟ್ಟದೂರು, ಬಸವರಾಜ ಶೀಲವಂತರ, ಕೆ.ಬಿ.ಗೋನಾಳ, ಡಿ.ಎಚ್.ಪೂಜಾರ, ಕಾಸಿಂ ಸರ್ದಾರ, ಸುಂಕಪ್ಪ ಗದಗ, ಕೆ.ಎಸ್.ಜನಾರ್ದನ, ಶಶಿಕಲಾ ಹಿರೇಮಠ, ಚನ್ನಮ್ಮ ಕುಕನೂರು, ಗಂಗಮ್ಮ, ಅಕ್ಕಮಹಾದೇವಿ ಗಂಗಾವತಿ, ಲಕ್ಷ$್ಮಮ್ಮ ಕನಕಗಿರಿ, ಶೇಖಮ್ಮ, ತಾಹೇರಾ ಬೇಗಂ, ಮುಮ್ತಾಜ್ ಕಂದಗಲ್, ಅಡಿವೆಪ್ಪ ಛಲವಾದಿ ಇತರರಿದ್ದರು.