

ಕೊಪ್ಪಳ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕರ ಶೋಷಣೆಯನ್ನು ಕಾನೂನುಬದ್ಧಗೊಳಿಸಲು ಮುಂದಾಗಿವೆ. ಹೊಸ ನಾಲ್ಕು ಕಾರ್ಮಿಕ ಸಂಹಿತೆಗಳು ಕಾರ್ಮಿಕರಿಗೆ ಮರಣಶಾಸನವಾಗಲಿವೆ. ಇದನ್ನು ವಿರೋಧಿಸಿ ದೇಶಾದ್ಯಂತ ಜುಲೈ 9ರಂದು ಮುಷ್ಕರಕ್ಕೆ ಕರೆ ನೀಡಿರುವುದಾಗಿ ಸಿಐಟಿಯು ರಾಜ್ಯ ಅಧ್ಯೆ ಎಸ್.ವರಲಕ್ಷಿ$್ಮ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಹೊಸ ಸಂಹಿತೆಗಳು ಕಾರ್ಮಿಕರನ್ನು ಗುಲಾಮರನ್ನಾಗಿ ಮಾಡಲಿವೆ. ವೇತನ, ಆರೋಗ್ಯ, ಮೂಲ ಸಸೌಕರ್ಯ ಹಕ್ಕು ಕಸಿಯಲಿವೆ.
ದುಡಿತದ ಅವಧಿ ಹೆಚ್ಚಿಸಲಾಗಿದೆ. ಈ ಮೊದಲು ಬಾಯ್ಲರ್ಗಳಲ್ಲಿ ಹೆಣ್ಣುಮಕ್ಕಳು ಕೆಲಸ ಮಾಡುವಂತಿರಲಿಲ್ಲ. ಇನ್ನು ಮುಂದೆ ಮಾಡಬೇಕಾಗುತ್ತದೆ. ನಿತ್ಯ 12 ಗಂಟೆ ದುಡಿವ ಅವಧಿ ಆದೇಶ ವಾಪಸ್ ಪಡೆಯಬೇಕು. ಕನಿಷ್ಠ ವೇತನ ಮೊತ್ತ 36 ಸಾವಿರ ರೂ.ನಿಗದಿ ಮಾಡಬೇಕು. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಬೇಕು. ಹೊಸ ಸಂಹಿತೆಗಳನ್ನು ಖಂಡಿಸಿ ಹಾಗೂ ನಮ್ಮ ಹಕ್ಕು ಪಡೆಯಲು ಮುಷ್ಕರ ಹಮ್ಮಿಕೊಳ್ಳಲಿದ್ದೇವೆಂದು ತಿಳಿಸಿದರು.
ಸಿಐಟಿಯು ರಾಜ್ಯ ಕಾರ್ಯದರ್ಶಿ ಪ್ರತಾಪ ಸಿಂಹ ಮಾತನಾಡಿ, ವಾರದಲ್ಲಿ ಐದು ದಿನ ಕೆಲಸ ಮಾಡಿ ಎರಡು ದಿನ ವಿಶ್ರಾಂತಿ ಪಡೆಯುವುದು ಉತ್ತಮ ಎನಿಸಬಹುದು. ವೈಜ್ಞಾನಿಕವಾಗಿ ಇದು ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಇದರಿಂದ ಕಾರ್ಖಾನೆ ಮಾಲೀಕರಿಗೆ ಲಾಭ ಹೊರತು ಕಾರ್ಮಿಕರಿಗಲ್ಲವೆಂದರು.
ಸಿಐಟಿಯು ರಾಜ್ಯ ಉಪಾಧ್ಯಕ್ಷ ಆರ್.ಎಸ್. ಬಸವರಾಜ, ರಾಜ್ಯ ಕಾರ್ಯದರ್ಶಿ ಸುನಂದಾ ಎಚ್.ಎಸ್., ಜಿಲ್ಲಾ ಕಾರ್ಯದರ್ಶಿ ಕಾಸೀಂ ಸರ್ದಾರ, ಜಿಲ್ಲಾಧ್ಯಕ್ಷ ನಿರುಪಾದಿ ಬೆಣಕಲ್ ಇದ್ದರು.