ಕುಷ್ಟಗಿವರೆಗೆ ಪ್ರಯೋಗಾರ್ಥ ರೈಲು ಸಂಚಾರ

district koppal kustagi train testing basavaraj kyavatar bjp
Published on

ಕೊಪ್ಪಳ: ಗದಗ&ವಾಡಿ ರೈಲ್ವೆ ಯೋಜನೆಯಡಿ ಕುಷ್ಟಗಿವರೆಗೆ ಕಾಮಗಾರಿ ಮುಗಿದಿದೆ. ಪ್ರಯೋಗಾರ್ಥ ರೈಲು ಸಂಚಾರ ಆರಂಭವಾಗಿದ್ದು, ಕೇಂದ್ರ ಸರ್ಕಾರದ ಕ್ರಮ ಶ್ಲಾನೀಯ ಎಂದು ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್​ ತಿಳಿಸಿದರು.

ಬೆಂಗಳೂರಿನಲ್ಲಿ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಭೇಟಿ ಮಾಡಿ ಮಾತನಾಡಿದರು.

ಮಾರ್ಚ 28ರಂದು ಗದಗ-&ವಾಡಿ ಹೊಸ ರೈಲ್ವೆ ಮಾರ್ಗ ವ್ಯಾಪ್ತಿಯಲ್ಲಿ ಯಲರ್ಬಗಾ ತಾಲೂಕಿನ ಲಿಂಗನಬಂಡಿಯಿಂದ ಕುಷ್ಟಗಿವರೆಗೆ ಸಿಎಆರ್​ಎಸ್​ ತಂಡ ರೈಲ್ವೆ ಮಾರ್ಗದ ತಾಂತ್ರಿಕ ತಪಾಸಣೆ ನಡೆಸಿದೆ. ಪ್ರಯೋಗಾರ್ಥ ರೈಲು ಸಂಚಾರ ಯಶಸ್ವಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​ ಹಾಗೂ ಸಚಿವ ಸೋಮಣ್ಣ ಅವರ ಸಹಕಾರದ ಪ್ರತಿಲ. ಸ್ವಾತಂತ್ರ್ಯ ನಂತರ ಕುಷ್ಟಗಿಗೆ ರೈಲು ಸಂಪರ್ಕ ಸಿಕ್ಕಿದೆ. ಈ ಮೂಲಕ ಈ ಭಾಗದ ಜನರ ಹಲವು ದಶಕಗಳ ಕನಸು ನನಸಾಗಿದೆ ಎಂದರು.

ಕುಷ್ಟಗಿ&ಹುಬ್ಬಳ್ಳಿ&ಯಶವಂತಪುರ ಮಾರ್ಗವಾಗಿ ರೈಕು ಸಂಚಾರ ಆರಂಭಿಸಬೇಕೆಂಬುದು ಜನರ ಪ್ರಮುಖ ಬೇಡಿಕೆ. ಇದರಿಂದ ಸಾರ್ವಜನಿಕರಿಗೆ ಹಾಗೂ ಸರಕು ಸಾಗಣೆಗೆ ಅನುಕೂಲಕವಾಗಲಿದೆ. ಆರ್ಥಿಕ ಚಟುವಟಿಕೆ ಹೆಚ್ಚಲಿದೆ. ವಾಡಿವರೆಗಿನ ಕಾಮಗಾರಿ ಬೇಗ ಪೂರ್ಣಗೊಂಡರೆ, ಕಕ ಭಾಗ ಹಾಗೂ ಮುಂಬೈ ಕರ್ನಾಟಕ ಸಂಪರ್ಕ ಬೆಸೆಯಲಿದೆ ಎಂದು ಮನವಿ ಮಾಡಿದರು. ಬಿಜೆಪಿ ಕಾರ್ಯಕರ್ತ ನೀಲಕಂಠಯ್ಯ ಹಿರೇಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net