

ಕೊಪ್ಪಳ : ಗಣಿಗಾರಿಕೆಯಿಂದ ಸಂಗ್ರಹವಾದ ರಾಜಧನವನ್ನು ನಿಯಮಾನುಸಾರ ಭಾದಿತ ಪ್ರದೇಶಗಳ ಅಭಿವೃದ್ಧಿಗೆ ಬಳಸಲು ಒತ್ತಾಯಿಸಿ ಕುಷ್ಟಗಿ ತಾಲೂಕಿನ ಬಂಡ್ರಗಲ್ ಗ್ರಾಮಸ್ಥರು ಎಡಿಸಿ ಸಿದ್ರಾಮೇಶ್ವರ ಅವರಿಗೆ ಮನವಿ ಸಲ್ಲಿಸಿದರು.
ನಮ್ಮ ಗ್ರಾಮ ಸೇರಿ ಸೇಬಿನಕಟ್ಟಿ, ಹೂಲಗೇರಿ, ಅಂಟರಠಾಣ ಹಾಗೂ ಇತರ ಗ್ರಾಮಗಳಲ್ಲಿ 40 ವರ್ಷದಿಂದ ಅಲಂಕಾರಿಕ ಶಿಲೆ ಗಣಿಗಾರಿಕೆ ನಡೆಯುತ್ತಿದೆ. ಗಣಿಗಾರಿಕೆಯಿಂದ ಪರಿಸರ, ರಸ್ತೆಗಳು ಹಾಳಾಗಿವೆ. ದೇಶ, ವಿದೇಶಗಳಿಗೆ ಕಲ್ಲುಗಳು ರ್ತಾಗುತ್ತಿವೆ. ಇದರಿಂದ ಸರ್ಕಾರಕ್ಕೂ ರಾಜಧನ ಸಂಗ್ರಹವಾಗುತ್ತಿದೆ. ಆದರೆ, ಖನಿಜ ನಿಧಿ ನಿಯಮಾವಳಿಯಂತೆ ಬಳಕೆಯಾಗುತ್ತಿಲ್ಲ. ರಾಜಧನದಿಂದ ನಮ್ಮೂರಿಗೆ ಯಾವೊಂದು ಅಭಿವೃದ್ಧಿ ಕಾರ್ಯಗಳಾಗಿಲ್ಲವೆಂದು ದೂರಿದರು.
ಗ್ರಾಮದ ಮಕ್ಕಳು ಹೈಸ್ಕೂಲ್ ಶಿಕ್ಷಣ ಪಡೆಯಲು ಬೇರೆಡೆ ತೆರಳಬೇಕಿದೆ. ವಸತಿ ಶಾಲೆಗಳು ಇಲ್ಲ. ಉತ್ತಮ ರಸ್ತೆ, ಚರಂಡಿ, ಬೀದಿ ದಿಪಗಳಿಲ್ಲ. ಗಣಿಗಾರಿಕೆಯಿಂದ ಗ್ರಾಮಗಳು ನೇರವಾಗಿ ಭಾದಿತವಾಗುತ್ತಿದ್ದರೂ ಅಭಿವೃದ್ಧಿ ಮಾಡುತ್ತಿಲ್ಲ. ನಿಯಮಾನುಸಾರ ಶೆ.60ರಷ್ಟು ಖನಿಜ ನಿಧಿಯನ್ನು ನೇರವಾಗಿ ಭಾದಿತ ಗ್ರಾಮದ ಅಭಿವೃದ್ಧಿಗೆ ಬಳಸಬೇಕು. ಆದರೆ, ಜಿಲ್ಲೆಯಲ್ಲಿ ಆ ನಿಯಮಗಳು ಪಾಲನೆಯಾಗುತ್ತಿಲ್ಲ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನಿಡಬೇಕೆಂದು ಒತ್ತಾಯಿಸಿದರು.
ಗ್ರಾಮಸ್ಥರಾದ ಬಾಲನಗೌಡ ಪೊಲೀಸ್ ಪಾಟೀಲ್, ಬಸವರಾಜ ಹಡಪದ, ಪರಸ್ಪ್ಪ ಕಮತರ, ಬಸಯ್ಯ ಹಿರೇಮಠ, ಅಂದಯ್ಯ ಹಿರೇಮಠ, ಹನುಮಪ್ಪ ವಣಗೇರಿ, ಶೇಖಪ್ಪ ಗೊನ್ನಾಗರ, ಪರಪ್ಪ ಕಮತರ್, ಹನಮಪ್ಪ ಚಿಲಾಪೂರ, ಬಸವರಾಜ ಕಮತರ, ಮಲ್ಲಪ್ಪ ಹೂಗಾರ ಇದ್ದರು.