ಕೊಪ್ಪಳ: 2025&-26ನೇ ಸಾಲಿನ ಕುಷ್ಟಗಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಸೆ.3ರಂದು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ.
ವೈಯಕ್ತಿಕ ಸ್ಪರ್ಧೆ ವಿಭಾಗದಲ್ಲಿ ಪುರುಫಿರ ಅಥ್ಲೆಟಿಕ್ಸ್ನಲ್ಲಿ 100, 200, 400, 800, 1500, 5000, 10000 ಮೀ. ಓಟ, ಉದ್ದ ಜಿಗಿತ, ಎತ್ತರ ಜಿಗಿತ, ತ್ರಿವಿಧ ಜಿಗಿತ, ಗುಂಡು ಎಸೆತ, ಚಕ್ರ ಎಸೆತ, ಭಲ್ಲೆ ಎಸೆತ, 110 ಮೀ ಹರ್ಡಲ್ಸ್ 4*100 ರಿಲೇ, 4*400 ಮೀ. ರಿಲೇ ಹಾಗೂ ಮಹಿಳೆಯರ ಅಥ್ಲೆಟಿಕ್ಸ್ನಲ್ಲಿ 100, 200, 400, 800, 1500, 3000 ಮೀ.ಓಟ, ಉದ್ದ ಜಿಗಿತ, ಎತ್ತರ ಜಿಗಿತ, ತ್ರಿವಿಧ ಜಿಗಿತ, ಗುಂಡು ಎಸೆತ, ಚಕ್ರ ಎಸೆತ, ಭಲ್ಲೆ ಎಸೆತ, 100 ಮೀ ಹರ್ಡಲ್ಸ್, 4*100 ರಿಲೆ, 4*400 ಮೀ. ರಿಲೇ ಸ್ಪರ್ಧೆಗಳಿರುತ್ತವೆ.
ಗುಂಪು ಸ್ಪರ್ಧೆಗಳಲ್ಲಿ ಪುರುಫಿ ಮತ್ತು ಮಹಿಳಾ ತಂಡಗಳಿಗೆ ವಾಲಿಬಾಲ್, ಕಬಡ್ಡಿ, ಖೋಖೋ, ಫುಟ್ಬಾಲ್, ಥ್ರೋಬಾಲ್ ಪಂದ್ಯಗಳು ಮತ್ತು ಯೋಗಾಸನದಲ್ಲಿ ಮಹಿಳಾ ಮತ್ತು ಪುರುಫಿ ಸ್ಪರ್ಧಿಗಳಿಗೆ ವೀರಭದ್ರಾಸನ, ಜಾನು ಶಿರ್ಶಾಸನ, ಹಲಾಸನ, ಧನುರಾಸನ ಸ್ಪರ್ಧೆ ಇರುತ್ತವೆ.
ನೋಂದಣಿ ಮತ್ತು ಮಾಹಿತಿಗೆ ಕುಷ್ಟಗಿ ಸ್ವಾಮಿ ವಿವೇಕಾನಂದ ಕ್ರೀಡಾ ಹಾಗೂ ಸಾಂಸತಿಕ ಸಂಘದ ಅಧ್ಯಕ್ಷರಾದ ಪಂಪಣ್ಣ ಇಂಡಿ ಸಂಪರ್ಕಿಸಬಹುದೆಂದು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.