ಶಿರೂರಿಗೆ ಸಚಿವರ ದಂಡು

Published on

ಕೊಪ್ಪಳ: ಕುಕನೂರು ತಾಲೂಕಿನ ಶಿರೂರು ಗ್ರಾಮದಲ್ಲಿ ಜೂ.22 ಮಾಜಿ ಸಿಎಂ ಕೆ.ಎಚ್​.ಪಾಟೀಲ್​ ಪುತ್ಥಳಿ ಅನಾವರಣ ಕಾರ್ಯಕ್ರಮ ಹಮ್ಮಿಕೊಂಡಿದ್ದು ಹಲವು ಸಚಿವರು ಆಗಮಿಸಲಿದ್ದಾರೆ.

ಕರ್ನಾಟಕ ನೀರಾವರಿ ನಿಗಮದಿಂದ ಮೂರ್ತಿ ನಿರ್ಮಿಸಿದ್ದು ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗೃಹ ಸಚಿವ ಜಿ.ಪರಮೇಶ್ವರ, ಪ್ರವಾಸೋದ್ಯಮ ಸಚಿವ ಎಚ್​.ಕೆ.ಪಾಟೀಲ್​, ಎನ್​.ಎಸ್​.ಬೋಸರಾಜು, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹಾಗೂ ಆಡಳಿತ ಸುಧಾರಣಾ ಆಯೋಗ ಅಧ್ಯಕ್ಷ ಆರ್​.ವಿ.ದೇಶಪಾಂಡೆ ಕಾರ್ಯಕ್ರಮದಲ್ಲಿ ಭಾಗಿಯಾಗುವರು.

ಸಚಿವ ತಂಗಡಗಿ, ಜೂ.21ರಂದು ರಾಯಚೂರಿನಿಂದ ಕಾರಟಗಿಗೆ ಆಗಮಿಸುವರು. ಜೂ.22ರಂದು ಬೆಳಗ್ಗೆ 10.30ಕ್ಕೆ ಕಾರಟಗಿಯಿಂದ ಕುಕನೂರು ತಾಲೂಕಿನ ಶಿರೂರುಗೆ ತೆರಳುವರು. ಸಂಜೆ 4 ಗಂಟೆಗೆ ಕಾರಟಗಿಗೆ ತೆರಳಿ ವಾಸ್ತವ್ಯ ಹೂಡುವರು. ಜೂ.23ಕ್ಕೆ ರಾಯಚೂರಿಗೆ ತೆರಳುವರು.

ಸಣ್ಣ ನೀರಾವರಿ ಸಚಿವ ಎನ್​.ಎಸ್​.ಬೋಸರಾಜು ರಾಯಚೂರಿನಿಂದ ಹೊರಟು ಬೆಳಗ್ಗೆ 11.15ಕ್ಕೆ ಶಿರೂರಿಗೆ ಆಗಮಿಸುವರು. ಕಾರ್ಯಕ್ರಮ ಬಳಿಕ ರಾಯಚೂರಿಗೆ ಪ್ರಯಾಣಿಸುವರು. ಪ್ರವಾಸೋದ್ಯಮ ಸಚಿವ ಎಚ್​.ಕೆ.ಪಾಟೀಲ್​, ಬೆಳಗ್ಗೆ 9.30ಕ್ಕೆ ಹೊಸಪೇಟೆಯಿಂದ ಹೊರಟು ಶಿರೂರಿಗೆ ಆಗಮಿಸುವರು. ಬಳಿಕ ಗದಗಿಗೆ ತೆರಳುವರು.

ಗೃಹ ಸಚಿವ ಡಾ.ಜಿ.ಪರಮೇಶ್ವರ ತುಮಕೂರಿನಿಂದ ಶಿರೂರಿಗೆ ಬೆಳಗ್ಗೆ 10.30ಕ್ಕೆ ಆಗಮಿಸುವರು. ಸಂಜೆ 4 ಗಂಟೆಗೆ ಶಿರೂರಿನಿಂದ ಬಾಗಲಕೋಟೆಗೆ ತೆರಳುವರು. ಆಡಳಿತ ಸುಧಾರಣಾ ಆಯೋಗ ಅಧ್ಯಕ್ಷ ಆರ್​.ವಿ.ದೇಶಪಾಂಡೆ, ಹಳಿಯಾಳದಿಂದ ಹೊರಟು ಬೆಳಗ್ಗೆ 11ಕ್ಕೆ ಶಿರೂರಿಗೆ ಆಗಮಿಸುವರು. ಕಾರ್ಯಕ್ರಮ ಬಳಿಕ ಹುಬ್ಬಳ್ಳಿಗೆ ತೆರಳುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net