ಬೆಟ್ಟದ ಲಿಂಗೇಶ್ವರ ದರ್ಶನ ಪಡೆದ ಭಕ್ತರು

Published on

ಕೊಪ್ಪಳ: ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ಕಾರ್ತಿಕ ಮಾಸ ಪ್ರಯುಕ್ತ ಪ್ರತಿ ವರ್ಷದಂತೆ ಸೋಮವಾರ ಬೆಟ್ಟದ ಲಿಂಗೇಶ್ವರ ಜಾತ್ರೋತ್ಸವ ನಡೆಯಿತು. 37 ಜೋಡಿಗಳು ನವ ಜೀವನಕ್ಕೆ ಕಾಲಿಟ್ಟರು.

ಸಂಜೆ ಜಾತ್ರೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮಾಜಿ ಸಂಸದ ಸಂಗಣ್ಣ ಕರಡಿ, ಜೀವನದಲ್ಲಿ ಸುಖ ದು@ಖ, ಏರುಪೇರು ಸಹಜ. ಸಮಸ್ಯೆಗಳನ್ನು ಮೆಟ್ಟಿ ನಿಂತು ಛಲದಿಂದ ಬಾಳಿ ಸಾಧಿಸಿ ತೋರಿಸಬೇಕು. ಇದನ್ನು ನವವಿವಾಹಿತರು ಅರಿತುಕೊಳ್ಳಿ. ಬಾಸಿಂಗ ಬಲ, ಕಷ್ಟ ಬಂದರೂ ತಾಳ್ಮೆ ಬೇಕು ಎಂದು ಸೂಚಿಸುವ ತಾಳಿ, ಕುಂಕುಮ, ಕಾಲುಂಗರ ಬಗ್ಗೆ ವಿಶ್ಲೇಷಿಸಿದರು.

ಮೈನಳ್ಳಿ ಮಠದ ಸಿದ್ದಲಿಂಗೇಶ್ವರ ಮಹಾಸ್ವಾಮೀಜಿ ಮಾತನಾಡಿ, ಕೂಕನಪಳ್ಳಿ ಗ್ರಾಮದಲ್ಲಿ ಸರ್ವ ಜನಾಂಗದವರಿದ್ದಾರೆ. ಒಗ್ಗಟ್ಟಿನೊಂದಿಗೆ ಸಮಾಜಮುಖಿಯಾಗಿ ಕಾರ್ಯ ಮಾಡುತ್ತಾರೆ. ಪ್ರತಿ ವರ್ಷ ಜಾತ್ರಾ ಮಹೋತ್ಸವದಲ್ಲಿ ಸಾಮೂಹಿಕ ವಿವಾಹ ಎರ್ಪಡಿಸಿ ಬಡವರಿಗೆ ಆಗುವ ಆಥಿರ್ಕ ಹೊರೆ ನೀಗಿಸಿದ್ದಾರೆ. ಗ್ರಾಮದ ಹಿರಿಯರ ಮಾರ್ಗದರ್ಶನ ಸಾರ್ಥಕತೆ ಪಡೆದಿದೆ ಎಂದರು. ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net