ಪ್ರೋತ್ಸಾಹಧನ ವಿತರಣೆ ಮಾಡಿ

district koppal ksrtc workers union general Secretary vijayabaskara press meet in koppal
ksrtc workers union general Secretary vijayabaskara press meet in koppal
Published on

ಕೊಪ್ಪಳ: ರಾಜ್ಯ ಸರ್ಕಾರ ಕೆಎಸ್​ಆರ್ಟಿಸಿ ಸಿಬ್ಬಂದಿಗೆ ಪ್ರೋತ್ಸಾಹಧನ ವಿತರಣೆ ಸೇರಿ ಇತರ ಬೇಡಿಕೆ ಈಡೇರಿಸಬೇಕೆಂದು ಕೆಎಸ್​ಆರ್ಟಿಸಿ ಸ್ಟ್​ಾ ಆ್ಯಂಡ್​ ವರ್ಕರ್ಸ್​ ೆಡರೇಷನ್​ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯ ಭಾಸ್ಕರ ಒತ್ತಾಯಿಸಿದರು.

ಸರ್ಕಾರ ನಮ್ಮ ಬೇಡಿಕೆ ಪರಿಗಣಿಸುತ್ತಿಲ್ಲ. ಸಾರಿಗೆ ನಿಗಮಗಳ ಕಾರ್ಮಿಕ ಸಂಟನೆಗಳ ಜಂಟಿ ಕ್ರಿಯಾ ಸಮಿತಿ ಹಲವು ಬಾರಿ ಹೋರಾಟ ಮಾಡಿದೆ. ಸಾರಿಗೆ ಸಚಿವರು ಹಾಗೂ ನಿಮಗಮಕ್ಕೆ ನಮ್ಮ ಬೇಡಿಕೆ ಪಟ್ಟಿ ಸಲ್ಲಿಸಿದ್ದೇವೆ. ಮುಷ್ಕರ ಮಾಡಿದಾಗಲೆಲ್ಲ ಬೇಡಿಕೆ ಈಡೇರಿಸುವುದಾಗಿ ಹೇಳುವ ಸರ್ಕಾರ ನಂತರ ಮೌನವಹಿಸುತ್ತಿರುವುದು ಸರಿಯಲ್ಲವೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿಷಾದ ವ್ಯಕ್ತಪಡಿಸಿದರು.

ಶಕ್ತಿ ಯೋಜನೆ ಜಾರಿಗೆ ಮುನ್ನ ಸಿಎಂ ಬಜೆಟ್​ ಪೂರ್ವ ಸಭೆ ಕರೆದಾಗ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲು ನೌಕರರಿಗೆ ತಾಕೀತು ಮಾಡಿದ್ದೇವೆ. ಜನೆವರಿ 1ರಿಂದ ವೇತನ ಹೆಚ್ಚಳ ಒಪ್ಪಂದಕ್ಕೆ ಒಪ್ಪಿಕೊಳ್ಳುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗಿತ್ತು. ಶಕ್ತಿ ಯೋಜನೆ ಬಂದಾಗಿನಿಂದ ನೌಕರರು ಸಾಕಷ್ಟು ಒತ್ತಡದಲ್ಲಿದ್ದಾರೆ. ಅವಶ್ಯಕತೆಗೆ ತಕ್ಕಂತೆ ವಾಹನಗಳಿಲ್ಲ. ಪ್ರಯಾಣಿಕರ ಸಂಖ್ಯೆ ಮಿತಿ ಮೀರಿದ್ದು, ಸಿಬ್ಬಂದಿ ಕೊರತೆ ಕಾಡುತ್ತಿದೆ. ಪರಿಣಾಮ ಸಿಬ್ಬಂದಿ ಕೆಲಸದ ಒತ್ತಡದಿಂದ ಹೈರಾಣಾಗಿದ್ದಾರೆ. ಅಲ್ಲಲ್ಲಿ ಚಾಲಕ, ನಿರ್ವಾಹಕರ ಮೇಲೆ ದಾಳಿಗಳಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ತಾಂತ್ರಿಕ ಸಿಬ್ಬಂದಿಗೆ ಪ್ರೋತ್ಸಾಹಧನ, ಚಾಲಕ, ನಿರ್ವಾಹಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಿಸ್ತಿನ ಕ್ರಮ ಕೈಗೊಳ್ಳಬೇಕು. ನಿಗಮ, ವಿಭಾಗ ಅಥವಾ ಘಟಕಗಳ ಮಟ್ಟದಲ್ಲಿ ಆಡಳಿತ ವರ್ಗವು ಕಾರ್ಮಿಕ ಸಂಘಟನೆಗಳೊಂದಿಗೆ ಕಾಲ-ಕಾಲಕ್ಕೆ ದ್ವಿಪಕ್ಷೀಯ ಸಭೆ ನಡೆಸಬೇಕು. ನೌಕರರ ಬೇಡಿಕೆಗಳನ್ನು ಜೂನ್​ 15ರೊಳಗೆ ಈಡೇರಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಚಳವಳಿ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು. ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಎಚ್​.ಜಿ.ಉಮೇಶ, ರಾಜ್ಯ ಕಾರ್ಯದರ್ಶಿ ಗಿರೀಶ, ಜಿಲ್ಲಾ ಸಂಚಾಲಕ ಡಾ.ಕೆ.ಎಸ್​ ಜನಾರ್ದನ, ಪ್ರಧಾನ ಕಾರ್ಯದರ್ಶಿ ಎ.ಬಿ.ದಿಂಡೂರ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net