ಜೆಸಿಬಿ ಪಕ್ಷಗಳನ್ನು ಅಧಿಕಾರದಿಂದ ಕಿತ್ತೊಗೆಯಿರಿ:ರವಿಕೃಷ್ಣಾರೆಡ್ಡಿ

KRS PARTY JATHA IN KOPPAL RAVIKRISHNA REDDI SPEECH
ಕೊಪ್ಪಳದಲ್ಲಿ ಕೆಆರ್​ಎಸ್​ ಪಕ್ಷದಿಂದ ಬುಧವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಮಾತನಾಡಿದರು. ರಾಜ್ಯ ಉಪಾಧ್ಯಕ್ಷ ಲಿಂಗೇಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ್​ ಸಿ.ಎನ್​., ರಾಜ್ಯ ಕಾರ್ಯದರ್ಶಿಗಳಾದ ರಘು ಜಾಣಗೆರೆ, ನರಸಿಂಹಮೂರ್ತಿ, ಆಶಾ ವಿರೇಶ ಇದ್ದರು.
Published on

ಕೊಪ್ಪಳ: ಪ್ರಜಾಪ್ರಭುತ್ವದ ಆಶಯಗಳನ್ನು ಮಣ್ಣುಪಾಲು ಮಾಡುತ್ತಿರುವ ಜೆಸಿಬಿ ಪಕ್ಷಗಳನ್ನು ಅಧಿಕಾರದಿಂದ ಕಿತ್ತೆಸೆಯಿರಿ ಎಂದು ಕೆಆರ್​ಎಸ್​ ಪಕ್ಷದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಹೇಳಿದರು.

ಪಕ್ಷದಿಂದ ಹಮ್ಮಿಕೊಂಡಿರುವ ಕರ್ನಾಟಕಕ್ಕಾಗಿ ನಾವು ಜಾಥಾ ಅಂಗವಾಗಿ ನಗರದ ಈಶ್ವರ ಪಾರ್ಕ್​ನಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದರು.

ಭ್ರಷ್ಟ, ಅಪ್ರಾಮಾಣಿಕ, ಅನೈತಿ ನಡುವಳಿಕೆ ಹೊಂದಿದವರನ್ನು ಅಧಿಕಾರದಿಂದ ದೂರವಿಡಿ. ಸಮಾಜಘಾತುಕ ಶಕ್ತಿಗಳಾಗಿ ಬೆಳೆಯುತ್ತಿರುವ ಕಾಂಗ್ರೆಸ್​, ಬಿಜೆಪಿ, ಜೆಡಿಎಸ್​ ಪಕ್ಷಗಳನ್ನು ಚುನಾವಣೆಯಲ್ಲಿ ತಿರಸ್ಕರಿಸಿ. ಸ್ವಾರ್ಥಿಗಳು ತಮ್ಮ ಮಕ್ಕಳನ್ನೇ ರಾಜಕೀಯದಲ್ಲಿ ಮುಂದುವರೆಸುವ ಪರಂಪರೆಗೆ ಅಂತ್ಯ ಹಾಡಿ. ಜನಪರ ಕಾಳಜಿ, ಸ್ವಚ್ಛ ಮತ್ತು ಪ್ರಾಮಾಣಿಕ ರಾಜಕೀಯ ವ್ಯವಸ್ಥೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ನಮ್ಮ ಪಕ್ಷದವರನ್ನ ಬೆಂಬಲಿಸಿ ಎಂದರು.

ಕರ್ನಾಟಕಕ್ಕಾಗಿ ನಾವು ಬೈಕ್​ ಜಾಥಾ ೆ.19ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಿಂದ ಆರಂಭವಾಗಿ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ, ರಾಮನಗರ, ಮಂಡ್ಯ, ಚಾಮರಾಜನಗರ, ಮೈಸೂರು, ಕೊಡಗು, ಮಂಗಳೂರು, ಉಡುಪಿ, ಉತ್ತರ ಕನ್ನಡ, ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬೀದರ್​, ಕಲಬುರ್ಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯನಗರ, ಮಾರ್ಗವಾಗಿ ಕೊಪ್ಪಳ ತಲುಪಿದೆ. ಮುಂದೆ ಇತರ ಜಿಲ್ಲೆಗಳಲ್ಲಿ ಸಂಚರಿಸಲಿದೆ ಎಂದು ತಿಳಿಸಿದರು.

ಕೆಆರ್​ಎಸ್​ ಪಕ್ಷದ ಉಪಾಧ್ಯಕ್ಷ ಲಿಂಗೇಗೌಡ ಮಾತನಾಡಿ, ಜೆಸಿಬಿ ಪಕ್ಷಗಳು ರಾಜ್ಯದ ಜನತೆಗೆ ನಿರಂತರ ಅನ್ಯಾಯ ಮಾಡುತ್ತಿವೆ. ಪ್ರಾಮಾಣಿಕ, ಪ್ರಾದೇಶಿಕ ಪಕ್ಷಕ್ಕೆ ನಿಮ್ಮ ಬೆಂಬಲ ನೀಡಿ. ಪ್ರಾಮಾಣಿಕ ರಾಜಕಾರಣಕ್ಕಾಗಿ ಕೆಆರ್​ಎಸ್​ ಪಕ್ಷ ಬೆಂಬಲಿಸಿ ಎಂದು ಮನವಿ ಮಾಡಿದರು.

ಕೆಆರ್​ಎಸ್​ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ್​ ಸಿ.ಎನ್​., ರಾಜ್ಯ ಕಾರ್ಯದರ್ಶಿಗಳಾದ ರಘು ಜಾಣಗೆರೆ, ನರಸಿಂಹ ಮೂರ್ತಿ, ಜಂಟಿ ಕಾರ್ಯದರ್ಶಿ ರಘುಪತಿ ಭಟ್​, ಸಂಘಟನಾ ಕಾರ್ಯದರ್ಶಿ ಎಲ್​. ಜೀವನ್​, ಕೃಷ್ಣ ವಿ.ಬಿ., ಚಂದ್ರಶೇಖರ್​ ಮಠದ, ಬಿ.ಜಿ. ಕುಂಬಾರ್​, ಜಿಲ್ಲಾಧ್ಯೆ ಆಶಾ ವೀರೇಶ್​, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತ ಗುಡಚಳ್ಳಿ, ಕುಮಾರ್​, ಭಾವನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net