

ಕೊಪ್ಪಳ: ಕೊಪ್ಪಳ ತಾಲೂಕು ಕೃಷಿಕ ಸಮಾಜಕ್ಕೆ ನಡೆದ ಚುನಾವಣೆಯಲ್ಲಿ ಚುನಾವಣೆಯಲ್ಲಿ 15 ಕಾರ್ಯಕಾರಿ ಸದಸ್ಯರು ಅವಿರೋಧವಾಗಿ ಆಯ್ಕೆಯಾದರು.
ಕೆ.ಶಿವರಾಮ ದೊಡ್ಡನಿಂಗಪ್ಪ, ವಿದ್ಯಾಧರಗೌಡ ಹಿರೇಗೌಡ, ಹಾಲಯ್ಯ ಹುಡೇಜಾಲಿ, ಗ್ಯಾನಪ್ಪ ಬೆಳವಿನಾಳ, ದೇವಪ್ಪ ಬಹದ್ದೂರ ಬಂಡಿ, ವೈಜನಾಥ ದಿವಟರ್, ಪರಮೇಶ್ವರಗೌಡ ಪೊಲೀಸ್ ಪಾಟೀಲ್, ವೀರಣ್ಣ ಅಂಗಡಿ, ಸಣ್ಣ ಹನುಮಂತಪ್ಪ ಹುಳ್ಳಿ, ಮಲ್ಲಪ್ಪ ಡಂಬಳ, ಯಂಕರಡ್ಡಿ ಚುಕ್ಕನಕಲ್, ಬಸವರಾಜ ಮಾಳೆಕೊಪ್ಪ, ವಿರುಪಣ್ಣ ನವೋದಯ, ನಾಗರಾಜ ಹುರಕಡ್ಲಿ ಹಾಗೂ ಸಿದ್ದಪ್ಪ ಮೇಟಿ ನೂತನ ಸದಸ್ಯರಾಗಿ ಆಯ್ಕೆಯಾದರು.
2025 ರಿಂದ 2030ರ ಐದು ವರ್ಷಗಳ ಅವಧಿಗೆ ಚುನಾವಣೆ ನಡೆಯಿತು. ಎಲ್ಲ 15 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು ಎಂದು ಚುನಾವಣಾಧಿಕಾರಿ ಜೀವನಸಾಬ ತಿಳಿಸಿದರು.