ನಿಷೇಧಾಜ್ಞೆ ಜಾರಿ

Published on

ಕೊಪ್ಪಳ: ಕರ್ನಾಟಕ ಲೋಕಸೇವಾ ಆಯೋಗದಿಂದ ಡಿ.29 ರಂದು ಬೆಳಗ್ಗೆ 10 ರಿಂದ 12 ಗಂಟೆವರೆಗೆ ಹಾಗೂ ಮಧ್ಯಾಹ್ನ 2 ರಿಂದ ಸಂಜೆ 4 ಗಂಟೆವರೆಗೆ ಜಿಲ್ಲೆಯಲ್ಲಿ ನಡೆಯಲಿರುವ ಗೆಜೆಟೆಡ್​ ಪ್ರೊಬೇಫಿನರ್​ ಗ್ರೂಪ್​ 'ಎ' ಮತ್ತು 'ಬಿ' ವೃಂದದ ಹುದ್ದೆಗಳ ಪರೀಕ್ಷೆಗಳು ಸುಗಮ ಹಾಗೂ ಶಾಂತಿಯುತವಾಗಿ ನಡೆವ ಉದ್ದೇಶದಿಂದ ಪರೀಕ್ಷಾ ಕೇಂದ್ರದ ಸುತ್ತಲಿನ 200ಮೀಟರ್​ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ನಲಿನ್​ ಅತುಲ್​ ಆದೇಶಿಸಿದ್ದಾರೆ.

ಕೊಪ್ಪಳದ ಬಾ.ಸ.ಪಿಯು ಕಾಲೇಜು ಪ್ರೌಢಶಾಲಾ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ (ಮಹಿಳಾ) ಕಾಲೇಜು, ಬಾಲಕರ ಸರ್ಕಾರಿ ಪಿಯು ಕಾಲೇಜು, ಶ್ರೀ ಗವಿಸಿದ್ದೇಶ್ವರ ಪದವಿ ಕಾಲೇಜು, ಶ್ರೀ ಗವಿಸಿದ್ದೇಶ್ವರ ಪದವಿ ಪೂರ್ವ ಕಾಲೇಜು, ಕಾಳಿದಾಸ ಪ್ರೌಢ ಶಾಲೆ, ಶ್ರೀ ಗವಿಸಿದ್ದೇಶ್ವರ ಕಂಪೋಸಿಟ್​ ಪ್ರೌಢ ಶಾಲೆ, ಲಯನ್ಸ್​ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಗದಗ ರಸ್ತೆಯ ನ್ಯೂ ಎಕ್ಸಲೆಂಟ್​ ಪಬ್ಲಿಕ್​ ಸ್ಕೂಲ್​, ಭಾಗ್ಯನಗರದ ನ್ಯಾಷನಲ್​ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲೆ ವಿಭಾಗ), ನವಚೇತನ ಪಿಯು ಕಾಲೇಜು, ಟಣಕನಕಲ್​ನ ಆದರ್ಶ ವಿದ್ಯಾಲಯ, ದದೇಗಲ್​ನ ಸರಕಾರಿ ಪಾಲಿಟೆಕ್ನಿಕ್​ ಕಾಲೇಜು ಕೇಂದ್ರಗಳಲ್ಲಿ ಪರೀೆ ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net