

ಕೊಪ್ಪಳ: ಪರಸ್ಪರ ಸೌಹಾರ್ದತೆ ಬೆಳೆಸಿಕೊಂಡು ಜೀವನ ಸಾಗಿಸಿದರೆ ಬದುಕು ಸಾರ್ಥಕ- ಆಗಲಿದೆ ಎಂದು ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು.
ನಗರದ ಹಮಾಲರ ಕಾಲನಿಯಲ್ಲಿ ಹಮ್ಮಿಕೊಂಡಿದ್ದ ಕೋರಮ್ಮ ದೇವಿ ಜಾತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಬ್ಬ&ಹರಿದಿನಗಳಲ್ಲಿ ನಾವುಗಳು ಪರಸ್ಪರ ಭಾವೈಕ್ಯತೆ ಬೆಳೆಸಿಕೊಂಡು ಆಚರಣೆ ಮಾಡಬೇಕು. ಸೌಹಾರ್ದತೆಯಿಂದ ವರ್ತಿಸಬೇಕು. ಹಮಾಲರ ಬಡಾವಣೆ ಸೌಹಾರ್ದತೆಗೆ ಹೆಸರಾಗಿದೆ. ಯಾವುದೇ ಹಬ್ಬ ಬಂದರೂ ಎಲ್ಲರೂ ಒಗ್ಗೂಡಿ ಆಚರಿಸುತ್ತಾರೆ. ಇದು ಎಲ್ಲರಿಗೆ ಮಾದರಿ. ಎಲ್ಲರೂ ಸಹೋದರತ್ವ ಭಾವದಿಂದ ನಡೆದುಕೊಳ್ಳುತ್ತಾರೆ. ಹಬ್ಬಗಳು ನಮ್ಮ ಸಂಸತಿ ಪ್ರತಿಕ. ಬಡ ಜನರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ರಕ್ತದಾನ ಶಿಬಿರ, ನೇತ್ರ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದು ಉತ್ತಮ ಕೆಲಸ ಎಂದು ಪ್ರಶಂಸಿದರು.
ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ, ನಗರಸಭೆ ಉಪಾಧ್ಯೆ ಅಶ್ವಿನಿ ಗದುಗಿನ ಮಠ, ಜಿಪಂ ಮಾಜಿ ಸದಸ್ಯ ಗೂಳಪ್ಪ ಹಲಗೇರಿ, ಪ್ರಮುಖರಾದ ಸಂತೋಷ ದೇಶಪಾಂಡೆ, ಮಹಾಲಕ್ಷಿ$್ಮ ಕಂದಾರಿ, ಕೋರಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ವೇಣು ಲಡ್ಡು, ಉಪಾಧ್ಯಕ್ಷ ದೇವಪ್ಪ ಚಿಗರಿ, ಪದಾಧಿಕಾರಿಗಳಾದ ಶಿವಾಜಿ ಗುದಗಿ, ಹನುಮಂತಪ್ಪ ಬನ್ನಿಕೊಪ್ಪ, ನಾಗರಾಜ ಮೇಟಿ, ಬಶೀರ್ ಅಹ್ಮದ್ ಅತ್ತಾರ್, ಶರಣಪ್ಪ ಪಾಟೀಲ್ ಇತರರಿದ್ದರು.