ಸ್ನಾತಕೋತ್ತರ ಕೋರ್ಸುಗಳ ಪ್ರವೇಶಕ್ಕೆ ಅರ್ಜಿ ಅವಧಿ ವಿಸ್ತರಣೆ

Published on

ಕೊಪ್ಪಳ: ಕೊಪ್ಪಳ ವಿಶ್ವವಿದ್ಯಾಲಯದಿಂದ 2024-25ನೇ ಸಾಲಿನ ಎಂ.ಎ. ಕನ್ನಡ, ಇಂಗ್ಲೀಷ್​, ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಪತ್ರಿಕೋದ್ಯಮ, ಎಂ.ಕಾಂ. ಹಾಗೂ ಎಂ.ಎಸ್ಸಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರ ಕೋರ್ಸುಗಳಿಗೆ ಕೊಪ್ಪಳ ವಿಶ್ವವಿದ್ಯಾಲಯದ ಮುಖ್ಯ ಆವರಣ, ಸ್ನಾತಕೋತ್ತರ ಕೇಂದ್ರ, ಯಲಬುರ್ಗಾ ಮತ್ತು ಗಂಗಾವತಿ ಹಾಗೂ ಕೊಪ್ಪಳ ವಿಶ್ವವಿದ್ಯಾಲಯದ ಸಂಯೋಜಿತ ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಅನುದಾನೇತರ ಮಹಾವಿದ್ಯಾಲಯಗಳಲ್ಲಿ ಪ್ರವೇಶಾತಿಯನ್ನು ಯುಯುಸಿಎಂಎಸ್​ ತಂತ್ರಾಂಶದ ಮೂಲಕ ಪಡೆವ ಅವಧಿ ನ.11ವರೆಗೆ ವಿಸ್ತರಿಸಲಾಗಿದೆ.

ಯುಯುಸಿಎಂಎಸ್​ ಪೋರ್ಟಲ್​ https://uuems/http://karnataka.gov.in/ ಮೂಲಕ ಆನ್​ಲೈನ್​ ಅರ್ಜಿ ಸಲ್ಲಿಸಬಹುದು ಎಂದು ವಿವಿ ಕುಲಸಚಿವರು ತಿಳಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net