ಮೊಬೈಲ್​ ಕ್ರಷ್​ ಸಂಸ್ಥೆಯಿಂದ ಕೂಸಿನ ಮನೆ ವೀಕ್ಷಣೆ

district koppal koosinamane visit tp koppal
Published on

ಕೊಪ್ಪಳ: ತಾಲೂಕಿನ ವಿವಿಧ ಕೂಸಿನ ಮನೆಗಳಿಗೆ ಸೋಮವಾರ ಮೊಬೈಲ್​ ಕ್ರಷ್​ ಸಂಸ್ಥೆ ಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಂಸ್ಥೆಯ ವಿಜಯಲಕ್ಷಿ$್ಮ, ಚಿದಾನಂದಸ್ವಾಮಿ ತಾಲೂಕಿನ ಅಳವಂಡಿ, ಹಟ್ಟಿ, ಬೋಚನಹಳ್ಳಿ, ಕವಲೂರು, ಹಿಟ್ನಾಳ, ಬೇವಿನಹಳ್ಳಿ, ಬಂಡಿಹರ್ಲಾಪುರ, ಹುಲಿಗಿ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿದರು. ಕೂಸಿನ ಮನೆ ಕಾರ್ಯನಿರ್ವಹಣೆ, ಮಕ್ಕಳಿಗೆ ಆಹಾರ ವಿತರಣೆ, ಆರೋಗ್ಯ ತಪಾಸಣೆ, ಕೇರ್​ ಟೇಕರ್​ಗಳಿಗೆ ವೇತನ ಪಾವತಿ ಬಗ್ಗೆ ಮಾಹಿತಿ ಪಡೆದು, ಅಗತ್ಯ ಸಲಹೆ ನೀಡಿದರು.

ನಿತ್ಯ ಮಕ್ಕಳ ದಾಖಲಾತಿ ದಾಖಲಿಸಿ. ತಿಂಗಳಿಗೊಮ್ಮೆ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ. ಉತ್ತಮ ಆಹಾರ ನೀಡುವಂತೆ ತಿಳಿಸಿದರು. ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ವಿಷಯ ನಿರ್ವಾಹಕ ಬಸವರಾಜ ಬಳಿಗಾರ, ರಾಜೀವ್​ಗಾಂಧಿ ೆಲೋ ಸೌಜನ್ಯ, ಪಿಡಿಒಗಳಾದ ಸಂಜಯ್​, ರತ್ನಾ, ಅನಿತಾ ಕಿಲ್ಲೆದ, ರವಾಸಾಹೇಬ್​, ಗುರುದೇವಮ್ಮ, ಕೃಷ್ಣಮೂರ್ತಿ, ಗೀತಾಕುಮಾರಿ, ಕೊಟ್ರಪ್ಪ ಅಂಗಡಿ, ಕಾರ್ಯದರ್ಶಿ ಮಂಜುನಾಥಯ್ಯ, ಸಣ್ಣ ಜಂಬಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net