ಕೊಪ್ಪಳ: ಬಿಜೆಪಿ, ಕಾಂಗ್ರೆಸ್ ಸರ್ಕಾರಗಳು ಸಾಲ ಮಾಡಿ ಜನರ ಮೇಲೆ ಹೊರೆ ಹೆಚ್ಚಿಸುತ್ತಿವೆ. ಅಭಿವೃದ್ಧಿ ಮಾಡಿ ಎಂದರೆ ಸಾಲ ಮಾಡುತ್ತಿದ್ದಾರೆಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಆರೋಪಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಸಿದ್ದರಾಮಯ್ಯ ಸಾಲ ಮಾಡಿ ಲೆಕ್ಕಪತ್ರ ನೀಡುತ್ತಿದ್ದಾರೆ. ಸಾಲ ಮಾಡುವುದಾದರೆ ಬಜೆಟ್ ಮಂಡಿಸುವುದರಲ್ಲಿ ಅರ್ಥವಿಲ್ಲ. ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಶಿಾರಸು ಜಾರಿ ಮಾಡಿದೆ. ಒಪಿಎಸ್ ನೀಡಲು ಯೋಜಿಸಿದೆ. ಶಾಸಕರ ವೇತನ ಶೇ.50ರಷ್ಟು ಹೆಚ್ಚಿಸಲು ಮುಂದಾಗಿದೆ. ಇದರಿಂದ ಆರ್ಥಿಕ ಹೊರೆ ಹೆಚ್ಚಲಿದೆ. ಜನ ನೀಡಿದ ಅಧಿಕಾರ ದುರ್ಬಳಕೆಯಾಗುತ್ತಿದೆ. ಜನಪರ, ರೈತಪರ, ಅಹಿಂದ ಪರ ಎನ್ನುವ ಸಿದ್ದರಾಮಯ್ಯ ಅವರ ನಿಜವಾದ ಕಳಕಳಿ ಇದೇನಾ ಎಂದು ಪ್ರಶ್ನಿಸಿದರು.
ಎಸ್ಸಿ&ಎಸ್ಟಿ ಹಣ ಗ್ಯಾರಂಟಿಗೆ ಬಳಕೆಯಾಗುತ್ತಿದೆ. ಗ್ಯಾರಂಟಿಗೆ ಮೀಸಲಿಟ್ಟ ಹಣ ಎಲ್ಲಿ ಹೋಯಿತು ? ಕಾಂಗ್ರೆಸ್ ವಿವಿಧ ರಾಜ್ಯಗಳಲ್ಲಿ ನಡೆದ ಚುನಾವಣೆಗೆ ಈ ಹಣ ಬಳಸಿಕೊಂಡಿದೆ. ಬಿಜೆಪಿ ಪೇಟಿಎಂ, ಕಾಂಗ್ರೆಸ್ ಎಟಿಎಂ ಕೆಲಸ ಮಾಡುತ್ತಿವೆ. ಕಾಂಗ್ರೆಸ್ ಆಡಳಿತ ಸರಿಯಿಲ್ಲ. ಬಿಜೆಪಿ ವಿಪಕ್ಷವಾಗಿ ವಿಲವಾಗಿದೆ. ಪರ್ಯಾಯ ಪ್ರಾದೇಶಿಕ ಪಕ್ಷದ ಅಗತ್ಯವಿದೆ. ಈ ಬಗ್ಗೆ ಜನ ಜಾಗೃತಿ ಮಾಡುತ್ತಿದ್ದೇವೆ. ಜನಾಭಿಪ್ರಾಯ ಸಂಗ್ರಹಿಸಿ ಚರ್ಚಿಸುತ್ತಿದ್ದೇವೆ. ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ನವ ಕರ್ನಾಟಕ ನಿಮಾರ್ಣ ಆಂದೋಲನ ಎಂಬ ಘೋಷವಾಕ್ಯದಡಿ ಸಭೆಗಳನ್ನು ಮಾಡುತ್ತಿದ್ದೇವೆ ಎಂದರು.
ಸಂದ ರಾಜ್ಯ ಉಪಾಧ್ಯಕ್ಷ ಹನುಮಂತಪ್ಪ ಹೊಳೆಯಾಚೆ, ಮುಖಂಡರಾದ ಎಂ.ಗೋಪಿನಾಥ, ಶಿವಪುತ್ರಪ್ಪ ಗುಮಗೇರಿ, ಎಂ.ಕೆ.ಜಗ್ಗೇಶ ಇದ್ದರು.